Select Your Language

Notifications

webdunia
webdunia
webdunia
webdunia

ನೆರೆ ಪರಿಶೀಲನೆಗೆ ಬಂದ ಶಾಸಕ ಎಂ.ವೈ.ಪಾಟೀಲ್ ಗೆ ಸಂತ್ರಸ್ತರಿಂದ ತರಾಟೆ

ಕಲಬುರಗಿ
ಕಲಬುರಗಿ , ಭಾನುವಾರ, 18 ಅಕ್ಟೋಬರ್ 2020 (10:18 IST)
ಕಲಬುರಗಿ : ನೆರೆ ಬಂದ ಹಿನ್ನಲೆಯಲ್ಲಿ ಅಫಜಲಪುರ ತಾ.ಬಂಕಲಗಿ ಗ್ರಾಮಕ್ಕೆ ಭೇಟಿ ಶಾಸಕ ಎಂ.ವೈ.ಪಾಟೀಲ್ ಗೆ ಸಂತ್ರಸ್ತರು ತರಾಟೆ ತೆಗೆದುಕೊಂಡಿದ್ದಾರೆ.

ಕಲಬುರಗಿಯಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿದ್ದ ಹಿನ್ನಲೆಯಲ್ಲಿ  ಅಫಜಲಪುರ, ಜೇವರ್ಗಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದ್ದು,  35ಕ್ಕೂ ಹೆಚ್ಚು ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಸೇನಾ ಪಡೆಗಳಿಂದ ರಕ್ಷಣಾ ಕಾರ್ಯಚರಣೆ ನಡೆಸಿ 250ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದರು. ಆದರೆ ಅಂದು ಯಾವ ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಲಿಲ್ಲ. 

ಆದರೆ ಇದೀಗ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅಫಜಲಪುರ ತಾ.ಬಂಕಲಗಿ ಗ್ರಾಮಕ್ಕೆ ಭೇಟಿ ನೀಡಿದ್ದು, ಆ ವೇಳೆ ಶಾಸಕರನ್ನು ತರಾಟೆ ತೆಗೆದುಕೊಂಡ ಸಂತ್ರಸ್ತರು, ಅಂದು ನಾವು ಸತ್ತಿದ್ದೀವಾ.. ಬದುಕಿದ್ದೀವಾ ಅಂಥ ನೋಡೋಕೆ ಬಂದಿಲ್ಲ. ಮಳೆಗೆ ನಮ್ಮ ಬದುಕೇ ಬರ್ಬಾದ್ ಆಗಿಹೋಗಿದೆ ಎಂದು  ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆರೆಮನೆಯವನ ಕಾಟ ತಾಳಲಾರದೆ ಯುವತಿ ಹೀಗಾ ಮಾಡೋದು?