ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಸ್ನೇಹಿತನ ಮನೆಯ ಫ್ರಿಡ್ಜ್ ನಲ್ಲಿ ಪತ್ತೆ….!

Webdunia
ಭಾನುವಾರ, 15 ಅಕ್ಟೋಬರ್ 2017 (10:40 IST)
ನವದೆಹಲಿ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ಸೈದುಲಾಜಾಬ್‌ನಲ್ಲಿ ನಡೆದಿದೆ.

ಉತ್ತರಾಖಂಡ್‌‌ ಮೂಲದ ವಿಪಿನ್‌ ಜೋಷಿ(26) ಕೊಲೆಯಾದ ವ್ಯಕ್ತಿ. ವಿಪಿನ್‌ ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ. ವಿಪಿನ್‌ ಗಾಗಿ ಆತನ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದ ಕಾರಣ ಆತನ ಸ್ನೇಹಿತ ಬಾದಲ್‌ ಮಂಡಲ್‌ ಮನೆಯಲ್ಲಿರಬಹುದು ಎಂದು ಅಲ್ಲಿಗೆ ಬಂದಿದ್ದಾರೆ.

ಆದರೆ ಬಾದಲ್ ಮನೆ ಬೀಗ ಹಾಕಿತ್ತು. ಅಲ್ಲದೆ ಮನೆ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ವಿಪಿನ್ ಕುಟುಂಬಸ್ಥರು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಮುರಿದು ಒಳಹೊಕ್ಕಿದಾಗ ಫ್ರಿ‍ಡ್ಜ್ ನಲ್ಲಿ ವಿಪಿನ್ ಜೋಷಿ ಕತ್ತರಿಸಿ ತುಂಡಾದ ಸ್ಥಿತಿಯಲ್ಲಿ ಕಂಡು ಬಂದಿದೆ.

ವಿಪಿನ್ ಜೋಷಿ ಕತ್ತು ಸೀಳಿ ಹತ್ಯೆ ಮಾಡಿದ್ದು, ನಂತರ ದೇಹದ ಭಾಗಗಳನ್ನು ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟು ಬಾದಲ್ ಪರಾರಿಯಾಗಿದ್ದಾನೆ.  ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಾದಲ್ ಗಾಗಿ ಶೋಧ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮೋದಿ, ನಿತೇಶ್ ಜೋಡಿ ಬಿಹಾರವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದರು: ಅಮಿತ್ ಶಾ

ಮುಂದಿನ ಸುದ್ದಿ
Show comments