Select Your Language

Notifications

webdunia
webdunia
webdunia
webdunia

ಚಿರತೆ ದಾಳಿ: ವ್ಯಕ್ತಿಯ ಅರ್ಧ ದೇಹವನ್ನೇ ತಿಂದುಬಿಟ್ಟ ಚೀತಾ

ಚಿರತೆ ದಾಳಿ: ವ್ಯಕ್ತಿಯ ಅರ್ಧ ದೇಹವನ್ನೇ ತಿಂದುಬಿಟ್ಟ ಚೀತಾ
ಕೋಲಾರ , ಭಾನುವಾರ, 2 ಜುಲೈ 2017 (12:08 IST)
ಕೋಲಾರ: ಚಿರತೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದಲ್ಲಿ ನಡೆದಿದೆ.
 
ಬಂಡೂರು ಗ್ರಾಮದ ವೆಂಕಟೇಶಪ್ಪ (45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೆಂಕಟೇಷಪ್ಪ ರ ದೇಹದ ಅರ್ಧ ಭಾಗದಷ್ಟನ್ನು ಚಿರತೆ ತಿಂದು ಹಾಕಿದೆ. ಇಂದು ಬೆಳಗ್ಗೆ  ರಕ್ತ ಸಿಕ್ತ ಶವ ಪತ್ತೆಯಾಗಿದೆ.  
 
ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು , ಪೊಲೀಸರು ಭೇಟಿ ನೀಡಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣಮಠದಲ್ಲಿ ಇಫ್ತಾರ್ ಕೂಟ: ರಾಜ್ಯದಾದ್ಯಂತ ಶ್ರೀರಾಮಸೇನೆ ಪ್ರತಿಭಟನೆ