Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪ್ರಣಾಳಿಕೆಯಂತೆ 1 ಲಕ್ಷ ರೂ. ಸಿಗುತ್ತೆ ಅಂತ ಪೋಸ್ಟ್ ಆಫೀಸ್ ಎದುರು ಮುಸ್ಲಿಂ ಮಹಿಳೆಯರ ಕ್ಯೂ

Bengaluru post ofice

Krishnaveni K

ಬೆಂಗಳೂರು , ಗುರುವಾರ, 30 ಮೇ 2024 (09:58 IST)
Photo Credit: X
ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ವರ್ಷಕ್ಕೆ 1 ಲಕ್ಷ ರೂ. ಗಳಂತೆ ಮಹಿಳೆಯರ ಖಾತೆಗೆ ನೀಡಗಿದೆ ಎಂಬ ಭರವಸೆ ನಂಬಿ ಸಾಕಷ್ಟು ಮಹಿಳೆಯರು ಕಳೇದ ಎರಡು ದಿನಗಳಿಂದ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಮುಂಭಾಗ ಖಾತೆ ತೆರೆಯಲು ಕ್ಯೂ ನಿಂತ ಘಟನೆ ನಡೆದಿದೆ.

ಇದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಬಹುತೇಕ ಮುಸ್ಲಿಂ ಮಹಿಳೆಯರು ಬೆಳ್ಳಂ ಬೆಳಿಗ್ಗೆಯೇ ಅಂಚೆ ಕಚೇರಿ ಮುಂಭಾಗ ಖಾತೆ ತೆರೆಯಲು ಕ್ಯೂ ನಿಂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ತಿಂಗಳು ಖಾತೆಗೆ 8 ಸಾವಿರ ರೂ. ಸಿಗುತ್ತದೆ ಎಂದು ಈಗಲೇ ಖಾತೆ ತೆರೆಯಲು ಮುಂದಾಗಿದ್ದಾರೆ.

ಅದರಲ್ಲೂ ಮೇ 31 ರೊಳಗೆ ಖಾತೆ ತೆರೆದವರಿಗೆ ಮಾತ್ರ ಅವಕಾಶ ಎಂದು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಸಂದೇಶ ನಂಬಿ ಹಲವಾರು ಮಹಿಳೆಯರು ಅಂಚೆ ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು.

ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಟೋಪಿ ಹಾಕುವುದು ಹೀಗೆ. ರಾಹುಲ್ ಗಾಂಧಿ ಮಾತು ನಂಬಿ ಟಕಾ ಟಕ್ ಎಂದು ಖಾತೆ ತೆರೆಯಲು ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಬಗ್ಗೆ ಅನುಕಂಪ ವ್ಯಕ್ತಪಡಿಸಿದೆ. ಜೊತೆಗೆ ಕಾಂಗ್ರೆಸ್ ನ್ನು ಟ್ರೋಲ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಬರುವ ಮೊದಲೇ ಜಾಮೀನು ಅರ್ಜಿ ಹಾಕಿ ರೆಡಿ ಆದ್ರು ಪ್ರಜ್ವಲ್ ರೇವಣ್ಣ