Select Your Language

Notifications

webdunia
webdunia
webdunia
webdunia

ಭೋಪಾಲ್ ಜೈಲ್ ಬ್ರೇಕ್, ಎನ್‌ಕೌಂಟರ್ ತನಿಖೆಗೆ ಆದೇಶಿಸಿದ ಸಿಎಂ

ಭೋಪಾಲ್ ಜೈಲ್ ಬ್ರೇಕ್, ಎನ್‌ಕೌಂಟರ್ ತನಿಖೆಗೆ ಆದೇಶಿಸಿದ ಸಿಎಂ
ಭೋಪಾಲ್ , ಶುಕ್ರವಾರ, 4 ನವೆಂಬರ್ 2016 (16:40 IST)
ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿರುವ ಸಿಮಿ ಉಗ್ರಗಾಮಿಗಳ ಭೋಪಾಲ್ ಜೈಲ್ ಬ್ರೇಕ್ ಮತ್ತು ಎನ್‌ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ. 

 
ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಕೆ. ಪಾಂಡೆ ಈ ತನಿಖೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಸರ್ಕಾರ ಗುರುವಾರ ರಾತ್ರಿ ಅಧಿಕೃತ ಪ್ರಕಟನೆ ಹೊರಡಿಸಿದೆ. 
 
ಪ್ರಕರಣದ ತನಿಖೆಯಾಗಬೇಕು ಎಂದು ಮಧ್ಯಪ್ರದೇಶ್ ಹೈಕೋರ್ಟ್‌ಗೆ ನಿನ್ನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಕೆಯಾಗಿದೆ. 
 
ಅಕ್ಟೋಬರ್ 31-31ರ ನಡುವಿನ ರಾತ್ರಿ 8 ಮಂದಿ ಸಿಮಿ ಉಗ್ರರು ಮಧ್ಯಪ್ರದೇಶದ ಭೋಪಾಲ್‌ನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಎಂಟು ಮಂದಿಯನ್ನು ಎನ್‌ಕೌಂಟರ್ ಮೂಲಕ ಹೊಡೆದುರುಳಿಸಿದ್ದರು.
 
ಇದು ನಕಲಿ ಎನ್‌ಕೌಂಟರ್ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಪ್ರಕರಣ ದೇಶಾದ್ಯಂತ ಚರ್ಚೆಗೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿ ಕಾರ್ ಚಾಲಕನ ನಿವೃತ್ತಿ ದಿನ ಏನಾಯ್ತು ?