Select Your Language

Notifications

webdunia
webdunia
webdunia
webdunia

ಡಿಸಿ ಕಾರ್ ಚಾಲಕನ ನಿವೃತ್ತಿ ದಿನ ಏನಾಯ್ತು ?

ಡಿಸಿ ಕಾರ್ ಚಾಲಕನ ನಿವೃತ್ತಿ ದಿನ ಏನಾಯ್ತು ?
ಮುಂಬೈ , ಶುಕ್ರವಾರ, 4 ನವೆಂಬರ್ 2016 (16:23 IST)
ಮಹಾರಾಷ್ಟ್ರ: ಬಿಳಿ ಕಾರು.. ಕಾರಿನ ಮೇಲೆ ಕೆಂಗುಲಾಬಿ.. ಹಿಂದಿನ ಸೀಟ್‌ನಲ್ಲಿ ಬಿಳಿ ಬಣ್ಣದ ಡ್ರೆಸ್ ತೊಟ್ಟು ಕುಳಿತಿರೋ ಡ್ರೈವರ್, ಮುಂದಿನ ಸೀಟ್‌ನಲ್ಲಿ ಕಾರ್ ಓಡಿಸ್ತಿರೋ ಜಿಲ್ಲಾಧಿಕಾರಿ. ಅರೇ ಇದೆನಪ್ಪ. ಕಾಲ ಬದಲಾಯಿತಾ ಅನ್ಕೊಳ್ಳಬೇಡಿ. ಬದಲಿದೆ ಇದೊಂದು ಮನತುಂಬುವ ಸ್ಟೋರಿ.
ಹೌದು.. ಜಿಲ್ಲಾಧಿಕಾರಿ ಜಿ. ಶ್ರೀಕಾಂತ್ ತಮ್ಮ ಕಾರು ಚಾಲಕ 58 ವರ್ಷದ ದಿಗಂಬರ್ ಥಕ್ ಅವರ ಅದ್ಧೂರಿ ಬೀಳ್ಕೊಡುಗೆಗೆ ನೀಡಿರೋ ಸರ್ಪ್ರೈಸ್ ಗಿಫ್ಟ್ ಇದು. ವೃತ್ತಿಗೆ ಪಾದಾರ್ಪಣೆ ಮಾಡಿದಾಗಿನಿಂದ ಚಾಲಕ ದಿಗಂಬರ್ ಇಲ್ಲಿಯವರೆಗೂ ಬರೋಬ್ಬರಿ 18 ಜಿಲ್ಲಾಧಿಕಾರಿಗಳಿಗೆ ಕಾರ್ ಚಾಲಕರಾಗಿ ತಮ್ಮ ಅತ್ಯುತ್ತಮ ಸೇವೆ ನೀಡಿದ್ದಾರೆ ಇದೇ ಉದ್ದೇಶದಿಂದ ಇಂತಹ ವ್ಯಕ್ತಿಗೆ ಅದ್ಬುತ ರೀತಿಯಲ್ಲಿ ಬೀಳ್ಕೊಡುಗೆ ಮಾಡಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ಶ್ರೀಕಾಂತ್ ಲಕ್ಸೂರಿ ಗುಣಮಟ್ಟದ ಕಾರ್ ಪ್ರಸೆಂಟ್ ಮಾಡಿದ್ದಾರೆ.
 
ಜಿಲ್ಲಾಧಿಕಾರಿ ಅವರ ಈ ಹೃದಯವಂತಿಕೆಗೆ ದಿಗಂಬರ್ ಆಭಾರಿಯಾಗಿದ್ದಾರೆ. ಕರ್ತವ್ಯದ ಕೊನೆ ದಿನ ನೆನಪಿನಲ್ಲಿಟ್ಟುಕೊಳ್ಳುವಂತಾಗಿದೆ ಎಂದು ತುಂಬು ಹೃದಯದಿಂದ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗದೀಶ ಶೆಟ್ಟರ್ ಸುಳ್ಳು ಹೇಳಿದ್ದು ಯಾಕೆ?