ಮಗಳನ್ನು ಹೊಡೆದು, ಸುಟ್ಟು ಹಾಕಿದ ತಾಯಿ! ಮುಂದೇನಾಯ್ತು?

Webdunia
ಮಂಗಳವಾರ, 11 ಜನವರಿ 2022 (09:32 IST)
ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿಯೊಬ್ಬಳು ಹಣ ಕದ್ದ ಆರೋಪದ ಮೇಲೆ ಆಕೆಯ ತಾಯಿಯೇ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ.

ವೆಪ್ಪಂತಟ್ಟೈ ಗ್ರಾಮ ಆಡಳಿತಾಧಿಕಾರಿ (ವಿಎಒ) ನೀಡಿದ ದೂರಿನ ಆಧಾರದ ಮೇಲೆ ಪೆರಂಬಲೂರು ಮಹಿಳಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆ ಬಾಲಕಿಯ ಮೈಯನ್ನು ಬಿಸಿ ಚಮಚದಿಂದ ಸುಟ್ಟು, ಗಾಯಗೊಳಿಸಿದ್ದಾಳೆ. ನಂತರ ಆಕೆ ಸಾವನ್ನಪ್ಪಿದ್ದಾಳೆ.

ಪಿರ್ಯಾದಿದಾರರ ಪ್ರಕಾರ, ವೆಪ್ಪಂತಟ್ಟೈನ ತಿದೀರ್ ಕುಪ್ಪಂನಲ್ಲಿ ವಾಸವಿದ್ದ ಮಣಿಮೇಕಲೈ ಮತ್ತು ರಾಜ ಎಂಬುವವರ ಮಗಳು 70 ರೂ. ಕಳ್ಳತನ ಮಾಡಿದ್ದಳು. ಇದಕ್ಕಾಗಿ ತಾಯಿ ಮಗುವಿಗೆ ಥಳಿಸಿದ್ದರು.

ಮಗಳನ್ನು ಹೊಡೆದದ್ದೂ ಅಲ್ಲದೆ ತನ್ನ ಮಗಳ ತೊಡೆ ಮತ್ತು ತುಟಿಗಳ ಮೇಲೆ ಬಿಸಿ ಚಮಚದಿಂದ ಬರೆ ಹಾಕಿದ್ದಳು. ಅಲ್ಲದೆ, ಮೆಣಸಿನ ಪುಡಿಯನ್ನು ಮೂಗಿನ ಬಳಿ ಹಿಡಿದು ಉಸಿರಾಡಲು ಹೇಳಿದ್ದಳು ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಘಟನೆ ಜನವರಿ 5ರಂದು ನಡೆದಿದೆ. ಇದರಿಂದ ಗಾಯಗೊಂಡ ಮಗು ಆಘಾತಕ್ಕೊಳಗಾಗಿದ್ದು, 2 ದಿನಗಳ ಕಾಲ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಮಗುವಿಗೆ ಬಹಳ ಗಾಯಗಳಾಗಿದ್ದರಿಂದ ಹತ್ತಿರದ ಔಷಧಾಲಯದಿಂದ ಔಷಧಿಗಳನ್ನು ಖರೀದಿಸಲಾಯಿತು.

ನಂತರ ಆ ಮಗುವನ್ನು ಕೃಷ್ಣಪುರಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆ ಬಾಲಕಿಯನ್ನು ತಿರುಚ್ಚಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮೋದಿ, ನಿತೇಶ್ ಜೋಡಿ ಬಿಹಾರವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದರು: ಅಮಿತ್ ಶಾ

ಮುಂದಿನ ಸುದ್ದಿ
Show comments