Publish Date: Thu, 18 Jan 2018 (07:32 IST)
Updated Date: Thu, 18 Jan 2018 (07:37 IST)
ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ.
ಆಕೆಯ ಮಗ ಹುಟ್ಟಿದ 10 ತಿಂಗಳ ನಂತರ ಆತನಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದಿತ್ತು. ಮೊದಲ ಬಾರಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದರೆ ಅದು ಅಶುಭ ಹಾಗು ಬೇರೆ ಗ್ರಹಗಳ ನೆರಳು ಮಗುವಿನ ಮೇಲೆ ಬೀಳುತ್ತದೆ. ಆದ ಕಾರಣ ಮಗುವಿಗೆ ಎರಡನೇ ಹಲ್ಲು ಹುಟ್ಟುವ ಮೊದಲು ನಾಯಿಯ ಜೊತೆ ಮದುವೆ ಮಾಡಿದರೆ ಅಶುಭ ದೂರವಾಗುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ಅದಕ್ಕಾಗಿ ತಾಯಿ ಮಗನಿಗೆ ನಾಯಿಯ ಜೊತೆ ಮದುವೆ ಮಾಡಿದ್ದಾಳೆ. ಬಾಲಕನ ಈ ಮದುವೆಗೆ ಗ್ರಾಮಸ್ಥರೆಲ್ಲರೂ ಪಾಲ್ಗೊಂಡಿದ್ದು, ಸಂಪ್ರದಾಯದ ಪ್ರಕಾರ ಮದುವೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ