Select Your Language

Notifications

webdunia
webdunia
webdunia
webdunia

ಸಾಲದ ಸುಳಿಯಿಂದ ಹೊರಬರಲು ಈ ಮೂರು ನಿಯಮಗಳನ್ನು ಪಾಲಿಸಿ

ಸಾಲದ ಸುಳಿಯಿಂದ ಹೊರಬರಲು ಈ ಮೂರು ನಿಯಮಗಳನ್ನು ಪಾಲಿಸಿ
ಬೆಂಗಳೂರು , ಭಾನುವಾರ, 14 ಜನವರಿ 2018 (06:28 IST)
ಬೆಂಗಳೂರು : ಒಂದು ನಿಮಿಷ ಕೂಡ ಬಿಡುವಿಲ್ಲ. ಎಷ್ಟೇ ಕಷ್ಟಪಟ್ಟರೂ ಆದಾಯವಿಲ್ಲ. ದಿನ ದುಡಿದರೂ ಯಾವುದೇ ಫಲ ಸಿಗದೇ ಹಳೆಸಾಲ ತೀರಿಸಲಾಗದೆ ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ಅಂತವರು ಮೂರು ನಿಯಮಗಳನ್ನು ಏಳು ದಿನಗಳ ಕಾಲ ಮಾಡಿದರೆ ಸಾಕು ಅವರು ದುಡಿದ ಹಣ ಅವರ  ಕೈಯಲ್ಲೇ ಉಳಿಯುವುದರ ಜೊತೆಗೆ ಅವರು ತಾವು ಮಾಡುವ ಕೆಲಸದಲ್ಲಿ ಲಾಭಗಳನ್ನು ಕಾಣುತ್ತಾರೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.

 
ಇದು ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ನಿಯಮ. ಪ್ರತಿ ಬುಧವಾರ ಎರಡು ಸಣ್ಣ ಖಾಲಿ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ 7 ವಾರಗಳ ಕಾಲ ಮಾಡಿದರೆ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಕಾಣಬಹುದು.

 
ಶುಕ್ರವಾರದಂದು ಒಂದು ಜುಟ್ಟಿರುವ ತೆಂಗಿನಕಾಯಿಗೆ ಕುಂಕುಮ ಹಚ್ಚಿ, ಮನಪೂರ್ವಕವಾಗಿ ಲಕ್ಷ್ಮೀದೇವಿಯನ್ನು ಸ್ಮರಿಸುತ್ತಾ ನೀರಿನಲ್ಲಿ ಬಿಡಬೇಕು. ಇದನ್ನು ಕೂಡ  7ವಾರಗಳ ಕಾಲ ಮಾಡಿದರೆ ಅಂದುಕೊಂಡ ಬಯಕೆಗಳು ಈಡೇರುತ್ತದೆ.

 
ಬೆಳಿಗ್ಗೆ ಎದ್ದ ತಕ್ಷಣ ಎರಡು ಅಂಗೈಗಳನ್ನು ಹತ್ತಿರ ತಂದು ನೋಡಬೇಕು. ಇದರಿಂದ ವಿಷ್ಣು, ಮಹಾಲಕ್ಷ್ಮೀ ಅನುಗ್ರಹ ದೊರೆಯುತ್ತದೆ. ಹಾಗೆ ವ್ಯಾಪಾರದಲ್ಲಿ ಲಾಭವನ್ನು ಕಾಣುವುದರ ಜೊತೆಗೆ ಸಾಲದ ಭಾದೆ ಕೂಡ ತೀರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಮುಳುಗಿದ ಮೇಲೆ ಮನೆಯಿಂದ ಹೊರಗೆ ನೀಡಲೇಬಾರದಂತ 5 ವಸ್ತುಗಳು ಯಾವುವು ಗೊತ್ತಾ…?