ಸೊಸೆಯನ್ನ ರಕ್ಷಿಸಲು ಮಗನನ್ನೆ ಕೊಂದ ತಾಯಿ..!

Webdunia
ಗುರುವಾರ, 17 ಆಗಸ್ಟ್ 2017 (14:53 IST)
ಮಗ ಕೊಡುತ್ತಿದ್ದ ಚಿತ್ರಹಿಂಸೆಯಿಂದ ಸೊಸೆಯನ್ನ ರಕ್ಷಿಸಲು ತಾಯಿಯೇ ಮಗನನ್ನ ಕೊಂದಿರುವ ಘಟನೆ ಮುಂಬೈನ ಮ್ಯಾನ್ ಖರ್ಡ್ ಪ್ರದೇಶದಲ್ಲಿ ನಡೆದಿದೆ. ಮಗ ಹತ್ಯೆ ಬಳಿಕಿಿಡೀ ರಾತ್ರಿ ತಾಯಿ ಮಗನ ಶವದ ಜೊತೆಯೇ ಕಳೆದಿರುವ ಬಗ್ಗೆ ವರದಿಯಾಗಿದೆ.

ಹತ್ಯೆ ಮಾಡಿದ ಮಹಿಳೆಯನ್ನ 45 ವರ್ಷದ ಅನ್ವಾರಿ ರಿ ಇದ್ರಿಸಿ ಎಂದು ಗುರ್ತಿಸಲಾಗಿದ್ದು, ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸರು ಹೇಳುವ ಪ್ರಕಾರ, 25 ವರ್ಷದ ನದೀಮ್ ನಾಯ್ಮ್ ತಾಯಿ, ಹೆಂಡತಿ ಮಕ್ಕಳೊಂದಿಗೆ ಅಂಬೇಡ್ಕರ್ ಚಾವ್ಲ್`ನಲ್ಲಿ ವಾಸವಿದ್ದ. ಮಾದಕ ವ್ಯಸನಿಯಾಗಿದ್ದ ನದೀಮ್ ಅದನ್ನ ಮುಚ್ಚಿಟ್ಟು ಮದುವೆಯಾಗಿದ್ದ. ಡ್ರಗ್ಸ್ ಸೇವಿಸಿ ದಿನವೂ ಹೆಂಡತಿಗೆ ಇನ್ನಿಲ್ಲದಂತೆ ಹೊಡೆದು ಹಿಂಸಿಸುತ್ತಿದ್ದ.

ಗಂಡನ ಕಾಟ ತಾಳಲಾರದೇ ಪತ್ನಿ ತವರುಮನೆಗೆ  ತೆರಳಲು ಸಿದ್ಧಳಾದಾಗ ಆಕೆಯನ್ನ ತಡೆದ ಅತ್ತೆ ಮಗನಿಗೆ ಬುದ್ಧಿ ಹೇಳಿ ಸರಿಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ತಾಯಿ ಮಾತನ್ನೂ ಕೇಳದ ನದೀಮ್ ಮತ್ತೆ ಅದೇ ದುಶ್ಚಟ ಮುಂದುವರೆಸಿದ್ದ. ನದೀಮ್ ಮಿತಿ ಮೀರಿರುವುದನ್ನ ಻ರಿತ ತಾಯಿ ಪತ್ನಿ ಮಕ್ಕಳನ್ನ ಪಕ್ಕದ ಮನೆಗೆ ಕಳುಹಿಸಿದ್ದಾರೆ. ಇದರಿಂದ ವ್ಯಗ್ರನಾದ ನದೀಮ್ ತಾಯಿ ಮೇಲೆಯೇ ಮುಗಿಬಿದ್ದಿದ್ದಾನೆ. ಈ ಸಂದರ್ಭ ದುಪ್ಪಟದಿಂದ ಮಗನ ಕುತ್ತಿಗೆ ಬಿಗಿದು ತಾಯಿ ಕೊಲೆ ಮಾಡಿದ್ದಾಳೆ. ಬೆಳಗ್ಗೆವರೆಗೂ ಶವದ ಮುಂದೆ ಕೂತು ಕಣ್ಣೀರು ಹಾಕಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ