Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ಪಾಂಡ್ಯ ಬ್ರದರ್ಸ್ ಅಪ್ಪನಿಗೆ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು ಗೊತ್ತಾ?

ಕ್ರಿಕೆಟಿಗ ಪಾಂಡ್ಯ ಬ್ರದರ್ಸ್ ಅಪ್ಪನಿಗೆ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು ಗೊತ್ತಾ?
ಮುಂಬೈ , ಗುರುವಾರ, 17 ಆಗಸ್ಟ್ 2017 (11:04 IST)
ಮುಂಬೈ: ಮುಂಬೈ ಇಂಡಿಯನ್ಸ್ ತಂಡವನ್ನು ಫಾಲೋ ಮಾಡುವವರಿಗೆ ಪಾಂಡ್ಯ ಬ್ರದರ್ಸ್ ಎಂದರೆ ಗೊತ್ತಾಗುತ್ತದೆ. ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ತಮ್ಮ ತಂದೆ ಅಚ್ಚರಿಯೊಂದನ್ನು ನೀಡಿದ್ದಾರೆ.

 
ಶ್ರೀಲಂಕಾದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಿರುಗಾಳಿಯಂತೆ ಆಡಿ ಶತಕ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ ಅದೇ ಖುಷಿಯಲ್ಲಿ ಪ್ರೀತಿಯ ಅಪ್ಪ ಹಿಮಾಂಶು ಪಾಂಡ್ಯಗೆ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಅದನ್ನು ಕೊಡಿಸಲು ಕೃನಾಲ್ ಪಾಂಡ್ಯ ಕಾರು ಶೋ ರೂಂಗೆ ಅಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಅಣ್ಣ ಹಾರ್ದಿಕ್ ಪಾಂಡ್ಯ ಶ್ರೀಲಂಕಾದಿಂದಲೇ ವಿಡಿಯೋ ಚಾಟಿಂಗ್ ಮೂಲಕ ತಮ್ಮ ಮತ್ತು ತಂದೆಗೆ ಕಾರು ಖರೀದಿಸಲು ಸಹಾಯ ಮಾಡಿದ್ದಾರೆ. ಇದನ್ನು ಸ್ವತಃ ಪಾಂಡ್ಯ  ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಅವರು ತನಗೆ ಮಾಡಿದ ಉಪಕಾರಕ್ಕೆ ನನ್ನದು ಚಿಕ್ಕ ಉಡುಗೊರೆ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಜಮೀರಣ್ಣ ಆಂಡ್ ಟೀಂಗೆ ರಾಹುಲ್ ಗಾಂಧಿ ಅಭಯ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ         

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್, ಸುರೇಶ್ ರೈನಾ ತಂಡದಿಂದ ಕೈ ಬಿಟ್ಟಿದ್ದರ ರಹಸ್ಯ ಬಯಲು