Select Your Language

Notifications

webdunia
webdunia
webdunia
webdunia

ಪೋಷಕರೇ ಎಚ್ಚರ.. ನಿಮ್ಮ ಮಕ್ಕಳೂ ಈ ಸೂಸೈಡ್ ಗೇಮ್ ಆಡುತ್ತಿರಬಹುದು..!

ಪೋಷಕರೇ ಎಚ್ಚರ.. ನಿಮ್ಮ ಮಕ್ಕಳೂ ಈ ಸೂಸೈಡ್ ಗೇಮ್ ಆಡುತ್ತಿರಬಹುದು..!
ಮುಂಬೈ , ಮಂಗಳವಾರ, 1 ಆಗಸ್ಟ್ 2017 (16:56 IST)
14 ವರ್ಷದ ಬಾಲಕ 7ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆನ್`ಲೈನ್`ನಲ್ಲಿ ಕುಖ್ಯಾತಿಗೆ ಪಾತ್ರವಾಗಿರುವ ಸೂಸೈಡ್ ಗೇಮ್ ಎನ್ನಲಾಗುವ ಬ್ಲೂ ವೇಲ್ ಆಟದಿಂದಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

ರಷ್ಯಾದಲ್ಲಿ ಬ್ಲೂವೇಲ್ ಆನ್`ಲೈನ್ ಸೂಸೈಡ್ ಗೇಮ್`ನಿಂದ 1ಲ್ಲಿ ಇದು ಮೊದಲನೇ 50 ಮಕ್ಕಳು ಮೃತಪಟ್ಟಿದ್ದು, ಭಾರತದಲ್ಲಿ ಇದು ಮೊದಲ ಪ್ರಕರಣ ಎನ್ನಲಾಗಿದೆ. ಜುಲೈ 30ರಂದು ಮುಂಬೈನ ಸಬರ್ಬನ್`ನ ಅಂಧೇರಿಯಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಮನ್`ಪ್ರೀತ್ ಸಿಂಗ್ ಎಂದು ಗುರ್ತಿಸಲಾಗಿದೆ. ಮಿಡ್ ಡೇ ವರದಿಗಳ ಪ್ರಕಾರ, ಆತ್ಮಹತ್ಯೆಗೆ ಹಿಂದಿನ ದಿನ ತಾನು ಬ್ಲೂ ವೇಲ್ ಗೇಮ್ ಆಡುತ್ತಿರುವುದಾಗ ಸ್ನೇಹಿತರ ಜೊತೆ ಮನ್`ಪ್ರೀತ್ ಹೇಳಿಕೊಂಡಿದ್ದನಂತೆ. ಜೊತೆಗೆ ಸೋಮವಾರ ಶಾಲೆಗೆ ಬರುವುದಿಲ್ಲವೆಂದು ಹೇಳಿದ್ದನಂತೆ.

ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಸ್ನೇಹಿತರ ಹೇಳಿಕೆ, ಘಟನಾ ಸ್ಥಳ ಮತ್ತು ಮೊಬೈಲ್ ಮಾಹಿತಿಗಳನ್ನ ಆಧರಿಸಿ ನೋಡಿದರೆ ಬ್ಲೂ ವೇಲ್ ಗೇಮ್ ಆಟದಿಂದಲೇ ಸಾವನ್ನಪ್ಪಿರುವುದು ಸ್ಪಷ್ಟವಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಮಾವೇಶ: ಜಿ.ಪರಮೇಶ್ವರ್