ತಾಯಿಗೆ ಇಟ್ಟಿಗೆಯಿಂದ ಹೊಡೆದ ಮಗ! ಮುಂದೇನಾಯ್ತು?

Webdunia
ಭಾನುವಾರ, 30 ಜನವರಿ 2022 (12:55 IST)
ನವದೆಹಲಿ : 60 ವರ್ಷದ ಮಹಿಳೆ ಮೇಲೆ ಆಕೆಯ ಮಗನೇ ಇಟ್ಟಿಗೆಯಿಂದ ಹಲ್ಲೆ ನಡೆಸಿ, ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆರೋಪಿ ಕಡಲೆಕಾಯಿ ವ್ಯಾಪಾರಿಯಾಗಿದ್ದು, ಪೋಷಕರನ್ನು ಬಿಟ್ಟು, ತನ್ನ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಗುರುಗ್ರಾಮ್ ಸೆಕ್ಟರ್ 11ರ ಗಾಂಧಿ ನಗರದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. 

ಆರೋಪಿಯ 30 ವರ್ಷದ ಸಹೋದರಿ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿದ್ದು, ಶುಕ್ರವಾರ ತನ್ನ ಪೋಷಕರ ಮನೆಗೆ ಆಗಮಿಸಿ ತಂಗಿಗೆ ಆಯ್ಕೆ ಮಾಡಿರುವ ವರ ಒಳ್ಳೆಯವನಲ್ಲ ಎಂದು ಜಗಳವಾಡಿದ್ದಾನೆ. ನಂತರ ತನ್ನ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವುದಾಗಿ ಆತನ ಸಹೋದರಿ ಆರೋಪಿಸಿದ್ದಾರೆ.

ಬಳಿಕ ಆತನನ್ನು ಗುರುಗ್ರಾಮ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದ್ದರಿಂದ ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತನ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉರಿಸೋದು ಅಂದ್ರೆ ಇದು... ಊಟದ ಮೆನುವಿನಲ್ಲಿ ಪಾಕಿಸ್ತಾನವನ್ನು ಹುರಿದು ಮುಕ್ಕಿದ ಭಾರತೀಯ ಸೇನೆ

ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಆತ್ಮಹತ್ಯೆಯ ಕಾರಣ ಬಹಿರಂಗಪಡಿಸಿದ ಪತ್ನಿ ಅಮ್ನೀತ್‌

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಗರ್ಭಿಣಿಯರು ಮಲಬದ್ಧತೆಯಾದರೆ ಏನು ಮಾಡಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments