Select Your Language

Notifications

webdunia
webdunia
webdunia
webdunia

12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ!

12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ!
ನವದೆಹಲಿ , ಶುಕ್ರವಾರ, 12 ಆಗಸ್ಟ್ 2022 (09:01 IST)
ಜೈಪುರ : ದೇಶದ ಹಲವು ರಾಜ್ಯಗಳಲ್ಲಿ ಜಾನುವಾರುಗಳನ್ನು ಲಂಪಿ ಚರ್ಮರೋಗ ಬಿಟ್ಟು ಬಿಡದೇ ಕಾಡುತ್ತಿದೆ.

ಈ ಮಾರಕ ರೋಗದ ಕಾರಣ ಕೇವಲ ರಾಜಸ್ಥಾನವೊಂದರಲ್ಲೇ 12 ಸಾವಿರ ಮೂಕಜೀವಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ರಾಜಸ್ಥಾನ ಸರ್ಕಾರ, ಜಾನುವಾರು ಸಂತೆಗಳನ್ನು ನಿಷೇಧಿಸಿದೆ. ರಾಜಸ್ಥಾನದಲ್ಲಿ ಈವರೆಗೂ 2.81 ಲಕ್ಷ ಹಸುಗಳನ್ನು ಲಂಪಿ ರೋಗ ಬಾಧಿಸಿದೆ.

ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ 2,511ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ನಂತರ ಬಾರ್ಮರ್ನಲ್ಲಿ 1,619, ಜೋಧ್ಪುರದಲ್ಲಿ 1,581, ಬಿಕಾನೇರ್ನಲ್ಲಿ 1,156, ಜಾಲೋರ್ನಲ್ಲಿ 1,150 ಮತ್ತು ಜಾಲೋರ್ನಲ್ಲಿ 1,138 ಸಾವುಗಳು ವರದಿಯಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಮಾರಕ ವೈರಸ್ ಪತ್ತೆ! ಆತಂಕಕ್ಕೊಳಗಾದ ಜನತೆ