ಮುಸ್ಲಿಮರು, ಕ್ರಿಶ್ಚಿಯನ್ನರು ಆರ್‌ಎಸ್‌ಎಸ್‌ ಸೇರಬಹುದಾ ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರ ಹೀಗಿದೆ

Sampriya
ಭಾನುವಾರ, 9 ನವೆಂಬರ್ 2025 (16:55 IST)
Photo Credit X
ಬೆಂಗಳೂರು:  ನಾವು ಬ್ರಾಹ್ಮಣರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎಂಬ ಪ್ರತ್ಯೇಕತೆಯನ್ನು ಬಿಟ್ಟು ತಾವು ಭಾರತ ಮಾತೆಯ ಪುತ್ರರು ಎಂದು ಬಂದರೆ ಅಂತವರಿಗೆ ಆರ್‌ಎಸ್‌ಎಸ್‌ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು

ಬೆಂಗಳೂರಿನಲ್ಲಿ '100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಆರೆಸ್ಸೆಸ್‌ ಸೇರಲು ಅವಕಾಶ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದರು

ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಸಮುದಾಯಗಳ ಜನರು ತಮ್ಮನ್ನು ಭಾರತ ಮಾತೆಯ ಪುತ್ರರು ಮತ್ತು ವಿಶಾಲ ಹಿಂದೂ ಸಮಾಜದ ಸದಸ್ಯರೆಂದು ಹೇಳುವವರನ್ನು ಸಂಘವು ಸ್ವಾಗತಿಸುತ್ತದೆ ಎಂದರು.

ಆರ್‌ಎಸ್‌ಎಸ್‌ ಸಂಘಟನೆಯು ಸದಸ್ಯರನ್ನು ಜಾತಿ ಮತ್ತು ಧರ್ಮದ ಮೂಲಕ ವರ್ಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಘವು ಬ್ರಾಹ್ಮಣರು ಸೇರಿದಂತೆ ಯಾವುದೇ ಜಾತಿಗೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. 

ಸಂಘದಲ್ಲಿ ಯಾವುದೇ ಜಾತಿಗೆ ಅವಕಾಶವಿಲ್ಲ. ಯಾವುದೇ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಸಂಘಕ್ಕೆ ಅವಕಾಶವಿಲ್ಲ. ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ವಿವಿಧ ಪಂಗಡದ ಜನರು, ಮುಸ್ಲಿಂ, ಕ್ರಿಶ್ಚಿಯನ್ನರು, ಯಾವುದೇ ಪಂಗಡದ ಜನರು ಸಂಘಕ್ಕೆ ಬರಬಹುದು ಆದರೆ ಪ್ರತ್ಯೇಕತೆಯನ್ನು ದೂರವಿಡಿ ಎಂದು ಸಂಘವು ವಿವರಿಸಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments