Select Your Language

Notifications

webdunia
webdunia
webdunia
webdunia

2022ರ ವೇಳೆಗೆ ನವಭಾರತ ನಿರ್ಮಾಣವಾಗಲೇಬೇಕು: ಮಿತ್ರಪಕ್ಷಗಳಿಗೆ ಮೋದಿ ಗಡುವು

2022ರ ವೇಳೆಗೆ ನವಭಾರತ ನಿರ್ಮಾಣವಾಗಲೇಬೇಕು: ಮಿತ್ರಪಕ್ಷಗಳಿಗೆ ಮೋದಿ ಗಡುವು
ನವದೆಹಲಿ , ಬುಧವಾರ, 12 ಏಪ್ರಿಲ್ 2017 (15:20 IST)
ದೇಶದ ಜನತೆ ಹೆಮ್ಮೆಪಡುವಂತೆ 2022ರ ವೇಳೆಗೆ ಹೊಸ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ತೊಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಿಗೆ ಗಡುವು ನೀಡಿದ್ದಾರೆ.
  
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಎನ್‌‌ಡಿಎ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ನಂತರದ ಜನಪ್ರಿಯ ರಾಜಕಾರಣಿ ಎನ್ನುವ ನಿರ್ಣಯವೊಂದನ್ನು ಮಂಡಿಸಲಾಯಿತು.
 
ಕೇರಳದಿಂದ ನಾಗಾಲ್ಯಾಂಡ್‌ವರೆಗೆ ಹರಡಿರುವ ಮಿತ್ರಪಕ್ಷಗಳು ಯುವಕರಿಗೆ ಸ್ಪೂರ್ತಿಯಾಗುವಂತಹ ಹೊಸ ಭಾರತ ನಿರ್ಮಾಣದ ಗುರಿಯನ್ನು ತಲುಪಲು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. 
 
ಪ್ರತಿಯೊಬ್ಬರು ನಾವು ದೇಶಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಬೇಕು. ಯುವಕರು ಹೊಸ ಭಾರತ ನಿರ್ಮಾಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ಅದರಂತೆ ನಾವು ಕಾರ್ಯನಿರ್ವಹಿಸಬೇಕಾಗಿದೆ. ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯುವಂತಹ ಚುನಾವಣೆ ಸುಧಾರಣೆಯಾಗಬೇಕಾಗಿದೆ ಎಂದರು.
 
ಮುಂದಿನ ಐದು ವರ್ಷಗಳ ಅಡಳಿತದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಚರ್ಚಿಸಲು ವಿಧಾನಸಭೆಯಲ್ಲಿ ವಾರದ ಅವಧಿಯಲ್ಲಿ ಒಂದು ದಿನ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.
 
ದೇಶದ ಜನತೆ ಅಭಿವೃದ್ಧಿಯ ನಿರೀಕ್ಷೆಗಳಿಂದಾಗಿ ಬಿಜೆಪಿ ಪಕ್ಷವನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಆದ್ದರಿಂದ, ನಮ್ಮ ಕಾರ್ಯವೈಖರಿಯಲ್ಲಿ ವೇಗದ ಬದಲಾವಣೆ ತರಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗದಗದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹ ಪತ್ತೆ