Select Your Language

Notifications

webdunia
webdunia
webdunia
webdunia

ಗದಗದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹ ಪತ್ತೆ

ಗದಗದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹ ಪತ್ತೆ
ಗದಗ , ಬುಧವಾರ, 12 ಏಪ್ರಿಲ್ 2017 (14:22 IST)
ಗದಗದಲ್ಲಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಣ್ಣಿನಡಿ ಸಿಲುಕಿದ್ದ ಜಮೀನು ಮಾಲೀಕ ಶಂಕರಪ್ಪ(30) ಮತ್ತು ಮೇಸ್ತ್ರೀ ಬಸವರಾಜು(33) ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸುಮಾರು 3 ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ರೋಣ ತಹಸೀಲ್ದಾರ್ ಶಿವಲಿಂಗ ಪ್ರಭು ವಾಲಿ ಖಚಿತಪಡಿಸಿದ್ದಾರೆ.

ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯ ರೀಬೋರಿಂಗ್ ವೇಳೆ ಬೆಳಗ್ಗೆ ಈ ಅವಘಡ ಸಂಭವಿಸಿತ್ತು. ಮಣ್ಣಿನಡಿ ಸಿಲುಕಿದ್ದರಿಂದ ಉಸಿರಾಟಕ್ಕೆ ಆಸ್ಪದವೇ ಇರಲಿಲ್ಲ, ಹೀಗಾಗಿ, ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ ಎಂದು ತಹಸೀಲ್ದಾರ್ ಹೇಳಿದ್ದಾರೆ.

ಅತ್ಯಂತ ವೇಗದ ಕಾರ್ಯಾಚರಣೆ ಇದಾಗಿದ್ದು, ಮೃತಪಟ್ಟಿರುವ ಶಂಕರಪ್ಪಗೆ ಮೂವರು ಮಕ್ಕಳಿದ್ದು, ಬಸವರಾಜುಗೆ ಇಬ್ಬರು ಮಕ್ಕಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಕ್ಕೆ ವಿರೋಧ: 225 ನಿದ್ರೆಮಾತ್ರೆಗಳನ್ನು ಸೇವಿಸಿದ ಪ್ರೇಮಿಗಳು