Publish Date: Mon, 25 Mar 2024 (19:00 IST)
Updated Date: Mon, 25 Mar 2024 (20:38 IST)
ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ "ಡಿಪಿ (ಡಿಸ್ಪ್ಲೇ ಚಿತ್ರ) ಅಭಿಯಾನವನ್ನು ಪ್ರಾರಂಭಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿ ಶಿಕ್ಷಣ ಸಚಿವ ಅತಿಶಿ ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲಿಗರೊಂದಿಗೆ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಿದರು.
ದೆಹಲಿ ಸಚಿವ, ಎಎಪಿ ನಾಯಕ ಅತಿಶಿ ಮಾತನಾಡಿ, ಪಕ್ಷದ ನಾಯಕರು ಮತ್ತು ಸ್ವಯಂಸೇವಕರು ತಮ್ಮ ಪ್ರೊಫೈಲ್ ಚಿತ್ರವನ್ನು ಎಕ್ಸ್ , ಫೇಸ್‌ಬುಕ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೇಜ್ರಿವಾಲ್ ಫೋಟೋ ಹಾಕಿದ್ದಾರೆ. ಅದಲ್ಲದೆ ಚಿತ್ರದ ಮೇಲೆ ಮೋದಿ ಕಾ ಸಬ್ಸೆ ಬಡಾ ದಾರ್ ಕೇಜ್ರಿವಾಲ್ (ಮೋದಿಯ ದೊಡ್ಡ ಭಯ ಕೇಜ್ರಿವಾಲ್) ಎಂಬ ಬರಹವನ್ನು ಬರೆದಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಪ್ರತಿ ಮನೆಗೂ ಹರಡಲು, ಇಂದು ಎಎಪಿ ಸಾಮಾಜಿಕ ಮಾಧ್ಯಮದಲ್ಲಿ ದೇಶಾದ್ಯಂತ 'ಡಿಪಿ ಅಭಿಯಾನ'ವನ್ನು ಪ್ರಾರಂಭಿಸಿದೆ. ಮಧ್ಯಾಹ್ನ 3 ಗಂಟೆಯಿಂದ ಎಲ್ಲಾ ಎಎಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಡಿಪಿಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಅತಿಶಿ ಮಾಧ್ಯಮಗಳಲ್ಲಿ ಹೇಳಿಕೊಂಡರು.