Select Your Language

Notifications

webdunia
webdunia
webdunia
webdunia

ಸಂಸತ್‌ನಲ್ಲಿ ಮೋದಿ ಸಚಿವರ ಕಾದಾಟ

ಸಂಸತ್‌ನಲ್ಲಿ ಮೋದಿ ಸಚಿವರ ಕಾದಾಟ
ನವದೆಹಲಿ , ಶನಿವಾರ, 30 ಏಪ್ರಿಲ್ 2016 (17:07 IST)
ಸಂಸತ್ತಿನಲ್ಲಿ ವಿರೋಧಿ ಪಕ್ಷಗಳ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯ . ಆದರೆ ಶುಕ್ರವಾರ ರಾಜ್ಯಸಭೆಯಲ್ಲಿ ಕೇಂದ್ರ ಸಚಿವರಿಬ್ಬರು ಕಿತ್ತಾಡಿಕೊಂಡಿದ್ದಾರೆ. ವಿರೋಧ ಪಕ್ಷದ ಸಂಸದರೊಬ್ಬರು ಜಾರ್ಖಂಡ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಯ ಕುರಿತು ಪ್ರಸ್ತಾಪಿಸಿದಾಗ ಈ ವಾಗ್ವಾದ ಪ್ರಾರಂಭವಾಯಿತು. 

ರಾಜ್ಯ ಸರ್ಕಾರ ಪ್ರಕರಣದ ಸತ್ಯಾಂಶಗಳನ್ನು ರುಜುವಾತು ಪಡಿಸಲಿದೆ ಎಂದಾಗ ಜೆಡಿ(ಯು) ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು. 
 
ಆಗ ಮಧ್ಯ ಪ್ರವೇಶಿಸಿದ ಮಹಿಳಾ ಮುಖ್ಯಮಂತ್ರಿ ಪ್ರಕರಣದ ಸಂಪೂರ್ಣ ವರದಿಗಾಗಿ ಜಾರ್ಖಂಡ್ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಆಗ ಮತ್ತೆ ಗಲಾಟೆ ಹೆಚ್ಚಾಗಿ ರಾಜ್ಯಸಭೆ ಕಲಾಪವನ್ನು ಮುಂದೂಡಲಾಯಿತು. 
 
ಆಗ ಸ್ತ್ರೀ ಸಚಿವೆ ಸಂಸದರ ಜತೆ ವ್ಯವಹರಿಸುವಾಗ ಹೆಚ್ಚು ಚಾತುರ್ಯದಿಂದ ವರ್ತಿಸಿ ಎಂದು ಸಲಹೆ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವ, ನೀವಿದನ್ನು ಕಾಂಗ್ರೆಸ್‌ನಿಂದ ಬಂದವರಾಗಿರುವುದರಿಂದ ಸಹಜವಾಗಿ ಇದನ್ನು ಹೇಳುತ್ತೀರಿ. ನಾನು ಬಿಜೆಪಿಯ ಹಳೆಯ ಸದಸ್ಯ ಮತ್ತು ಈ ಜನರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಬಲ್ಲೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲೇ ಹತ್ತಿರ ಕುಳಿತಿದ್ದ ಸಚಿವರು ಸಹ ಅವರ ವಾಗ್ವಾದದಿಂದ ದಂಗಾದರು.
 
ಪುರುಷ ಸಚಿವರ ಮಾತಿನಿಂದ ಬೇಸರಗೊಂಡ ಸಚಿವೆ ಈ ಸರ್ಕಾರದಲ್ಲಿ ಹೆಚ್ಚು ದಿನವಿರಬೇಕೆಂದು ಅನ್ನಿಸುತ್ತಿಲ್ಲ. ಆದಷ್ಟು ಬೇಗ ಪ್ರಧಾನಿಯವರಿಗೆ ರಾಜೀನಾಮೆ ಪತ್ರವನ್ನು ನೀಡುತ್ತೇನೆ ಎಂದರು. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿ ಎಲ್‌ಜಿ ಜಿ5 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ