Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿ ಎಲ್‌ಜಿ ಜಿ5 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ

ಶೀಘ್ರದಲ್ಲಿ ಎಲ್‌ಜಿ ಜಿ5 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ
ನವದೆಹಲಿ , ಶನಿವಾರ, 30 ಏಪ್ರಿಲ್ 2016 (16:47 IST)
ಭಾರತದ ಮಾರುಕಟ್ಟೆಗೆ ಮೊಟ್ಟ ಮೊದಲ ಮಾಡ್ಯುಲರ್ ಫೋನ್‌ಗಳಾದ ಎಲ್‌ಜಿ ಜಿ-5 ಆವೃತ್ತಿಯ ಬಿಡುಗಡೆ ಕುರಿತು ಪ್ರಸಕ್ತ ವರ್ಷದ ಎರಡನೇಯ ತ್ರೈಮಾಸಿಕದವರೆಗೂ ಯಾವುದೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿರಲಿಲ್ಲ.ಇದೀಗಮೇ 23 ರಂದು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಂಪೆನಿ ನಿರ್ಧರಿಸಿದೆ.
ಇದೀಗ, ಎಲ್‌ಜಿ ಜಿ-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಮಾರುಕಟ್ಟೆಗೆ ಬಿಡುಗಡೆಯಾಗುವ ದಿನಾಂಕ, ಪೂರ್ವ ಬುಕಿಂಗ್ ಮತ್ತು ಬೆಲೆ ಸೇರಿದಂತೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ.
 
ಮೂಲಗಳ ಪ್ರಕಾರ, ದಕ್ಷಿಣ ಕೊರಿಯಾ ಮೂಲದ ದೈತ್ಯ ಸಂಸ್ಥೆ, ಮೇ 3 ರಂದು ಭಾರತದ ಮಾರುಕಟ್ಟೆಗೆ ಜಿ-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸುತ್ತಿದ್ದು, ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಪೂರ್ವ ಬುಕಿಂಗ್ ಮೇ 13 ರಂದು ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಭಾರತದ ಮಾರುಕಟ್ಟೆಗೆ ಮೊಟ್ಟ ಮೊದಲ ಮಾಡ್ಯುಲರ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್‌ಜಿ ಜಿ-5 ಆವೃತ್ತಿಯ ಪೋನ್‌ಗಳ ಬೆಲೆ 50 ಸಾವಿರದಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಿಂಗ್ಸ್ ಕಂಪೆನಿ ಖರೀದಿಸಲಿರುವ ನೋಕಿಯಾ ಕಂಪೆನಿ