ಡಿಜಿಟಲ್ ಆರೋಗ್ಯ ಕ್ಷೇತ್ರದ ಉಪಕರಣಗಳ ತಯಾರಿಕೆಗೆ ಲಗ್ಗೆ ಹಾಕುವ ಮೂಲಕ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರುವ ನೋಕಿಯಾ, 191 ಮಿಲಿಯನ್ ಡಾಲರ್ ವೆಚ್ಚದಲ್ಲಿ ಫ್ರೆಂಚ್ ಮೂಲದ ಎಲೆಕ್ಟ್ರಾನಿಕ್ಸ್ ವಿಧಿಂಗ್ಸ್ ಎಸ್ಎ ಸಂಸ್ಥೆಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿರುವ ಹಿನ್ನೆಲೆಯಲ್ಲಿ, ರೋಗಿಗಳಿಗೆ ಸಹಾಯಕವಾಗುವಂತಹ ಉಪಕರಣಗಳ ಉತ್ಪಾದನೆಯಲ್ಲಿ ಹೆಚ್ಚಳಗೊಳಿಸಲು ಫಿನ್‌ಲ್ಯಾಂಡ್ ಮೂಲಗ ನೋಕಿಯಾ ಸಂಸ್ಥೆ ವಿಧಿಂಗ್ಸ್ ಸಂಸ್ಥೆ ಖರೀದಿಗೆ ಆಸಕ್ತಿ ತೋರಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ವಿಶ್ವದ ಪ್ರಮುಖ ಸೆಲ್‌ಪೋನ್ ತಯಾರಿಕಾ ಸಂಸ್ಥೆಗಳಲ್ಲಿ ನೋಕಿಯಾ ಅಗ್ರ ಸ್ಥಾನದಲ್ಲಿತ್ತು. ಕಳೆದ ವರ್ಷದಲ್ಲಿ ತನ್ನ ಮ್ಯಾಪಿಂಗ್ ಸೇವೆಯ ಹ್ಯಾಂಡ್‌ಸೆಟ್ ವಿಭಾಗವನ್ನು ಮೈಕ್ರೋಸಾಫ್ಟ್ ಸಂಸ್ಥೆಗೆ ಬಿಟ್ಟುಕೊಟ್ಟಿದ್ದು, ಪ್ರಮುಖ ಜಾಗತಿಕ ಜಾಲ ಸೇವೆಯನ್ನು ನೀಡಲು 15.6 ಬಿಲಿಯನ್ ವೆಚ್ಚದಲ್ಲಿ ಫ್ರೆಂಚ್ ಮೂಲದ ಲ್ಯೂಸೆಂಟ್ ಆಲ್ಕಾಟೆಲ್ ಕಂಪನಿ ಖರೀದಿ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ