Select Your Language

Notifications

webdunia
webdunia
webdunia
webdunia

ಚಂದೀಗಡ್‌ನಲ್ಲಿ 'ನಮೋ' ಯೋಗ

ಚಂದೀಗಡ್‌ನಲ್ಲಿ 'ನಮೋ' ಯೋಗ
ಚಂದೀಗಡ , ಮಂಗಳವಾರ, 21 ಜೂನ್ 2016 (10:11 IST)
ಎರಡನೇ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಚಂದೀಗಡದಲ್ಲಿ ಯೋಗಾಭ್ಯಾಸ ಮಾಡಿದರು. ಈ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಹರಿಯಾಣಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರಧಾನಿಗೆ ಸಾಥ್ ನೀಡಿದರು. ವಿವಿಧ ಗಣ್ಯರು ಸೇರಿದಂತೆ 30 ಸಾವಿರ ಜನರ ಜತೆ ಪ್ರಧಾನಿ ಯೋಗಾಭ್ಯಾಸ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಯೋಗಕ್ಕೆ ಯಾವುದೇ ಭೇದ-ಭಾವವಿಲ್ಲ. ಬಡವರು ಶ್ರೀಮಂತರು ಯೋಗ ಮಾಡುತ್ತಾರೆ. ಸಂಪೂರ್ಣ ಜಗತ್ತು ತನ್ನದೇ ರೀತಿಯಲ್ಲಿ ಯೋಗಕ್ಕೆ ಶರಣಾಗಿದೆ. ಇದು ಪರಲೋಕದ ವಿಜ್ಞಾನವಲ್ಲ, ಇಹಲೋಕದ ವಿಜ್ಞಾನ. ಇದು ತ್ಯಾಗದ ದಿನ. ತೆಗೆದುಕೊಳ್ಳುವ ದಿನವಲ್ಲ. ಆರೋಗ್ಯಕ್ಕೆ ಹಲವಾರು ದಿನಾಚರಣೆಗಳಿವೆ. ಆದರೆ ಯೋಗ ವಿಶ್ವದ ಸಾಮಾನ್ಯರ ದಿನಾಚರಣೆಯಾಗಿದೆ. ಒಂದೇ ವರ್ಷದಲ್ಲಿ ವಿಶ್ವದಲ್ಲಿ ವಿಶಿಷ್ಠ ಸ್ಥಾನಗಳಿಸಿದೆ. ಯೋಗ ದಿನದ ಮುಂದಾಳತ್ವವನ್ನು ಭಾರತ ವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಶುಭ ಗಳಿಗೆಯಲ್ಲಿ ಸಂಪೂರ್ಣ ದೇಶದ ಜನತೆ ಒಂದಾಗಿದ್ದೇವೆ. ಸಕಲ ರೋಗಕ್ಕೂ ದಿವ್ಯ ಜೌಷಧವಾದ ಯೋಗಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತೇಜನ ಕಲ್ಪಿಸಲಾಗುವುದು. ಮುಂದಿನ ವರ್ಷದಿಂದ ಅಂತರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯೋಗ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲಾ ಒಬ್ಬರು ಯೋಗಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಭಾರತದಲ್ಲಿ ಮಧುಮೇಹದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದು ಯೋಗವೇ ಅದಕ್ಕೆ ಅತ್ಯುತ್ತಮ ಔಷಧವಾಗಿದೆ. 
 
ಈ ವಿಶೇಷ ದಿನದ ನಿಮಿತ್ತ ದೇಶದೆಲ್ಲೆಡೆ 1 ಲಕ್ಷಕ್ಕೂ ಹೆಚ್ಚು ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 192 ದೇಶಗಳಲ್ಲಿ 
ಯೋಗದಿನಾಚರಣೆಯನ್ನು ಆಚರಿಸಲಾಗುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ನೋಡಿದ ಬಳಿಕ ನಿಮಗೆ ಪ್ರೀತಿ ಹುಟ್ಟದಿರದು (ವಿಡಿಯೋ)