Publish Date: Wed, 05 Apr 2017 (11:29 IST)
Updated Date: Wed, 05 Apr 2017 (11:59 IST)
ನರೇಂದ್ರಮೋದಿ ದೇಶದ ವಿವಿಧೆಡೆಯಿಂದ ಜನರು ಬರೆಯುವ ಪತ್ರಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾತುಗಳನ್ನ ಕೇಳಿದ್ದೀರಿ. ಇದೀಗ, ನರೇಂದ್ರಮೋದಿ ಬೆಂಗಳೂರಿನ ುದ್ಯಮಿಯೊಬ್ಬರನ್ನ ಟ್ವಿಟ್ಟರ್`ನಲ್ಲಿ ಫಾಲೋ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರಮೋದಿ ಫಾಲೋ ಮಾಡುವುದೆಂದರೆ ತಮಾಷೆ ವಿಷಯವೇ. ಅಂತಹ ಅದ್ಬುತ ವ್ಯಕ್ತಿತ್ವ ೀತನ ಬಳಿ ಏನಿದೆ ಎಂದು ಯೋಚಿಸುತ್ತಿದ್ದೀರಾ..? ಅದೇ ಸ್ವಚ್ಛ ಭಾರತ ಕ್ಯಾಂಪೇನ್.
ಹೌದು, ಆಕಾಶ್ ಜೈನ್ ತನ್ನ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯಲ್ಲಿ ಸ್ವಚ್ಛ ಭಾರತ್ ಲೋಗೋ ಪ್ರಿಂಟ್ ಮಾಡಿಸಿದ್ದರು. ಈ ಫೋಟೋವನ್ನ ಟ್ವಿಟ್ಟರ್`ಗೆ ಹಾಕಿ ನರೇಂದ್ರಮೋದಿಗೆ ಟ್ಯಾಗ್ ಮಾಡಿದ್ದರು. ಇದನ್ನ ನೋಡಿದ ಮೋದಿ ಆಕಾಶ್ ಜೈನ್ ಅವರನ್ನ ಫಾಲೋ ಮಾಡಿದ್ದಾರೆ.
ವಿಶ್ವಾದ್ಯಂತ 1700 ಮಂದಿಯನ್ನ ಮಾತ್ರ ಮೋದಿ ಫಾಲೋ ಮಾಡುತ್ತಿದ್ದು, ಅದರಲ್ಲಿ ಬೆಂಗಳೂರಿನ ಆಕಾಶ್ ಜೈನ್ ಕೂಡ ಒಬ್ಬರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ