Publish Date: Wed, 05 Apr 2017 (11:22 IST)
Updated Date: Wed, 05 Apr 2017 (11:25 IST)
ಮುಂದಿನ ಚುನಾವಣೆ ಬಳಿಕ ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ ಆಗುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಸದ್ಯ, ಸಿದ್ದರಾಮಯ್ಯನವರು ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ, ಮುಂದೆ ಜನರಿಂದ ಆಯ್ಕೆಯಾದ ದಲಿತ ಶಾಸಕರು ಹೈಕಮಾಂಡ್ ಒಪ್ಪಿದರೆ ಸಿಎಂ ಆಗುತ್ತಾರೆ ಎಂದು ಬೆಂಗಳೂರಿನಲ್ಲಿ ಆಂಜನೇಯ ಹೇಳಿದ್ದಾರೆ. .
ದಲಿತ ನಾಯಕರಿಗೆ ಕಾಂಗ್ರೆಸ್`ನಲ್ಲಿ ದೊಡ್ಡ ದೊಡ್ಡ ಸ್ಥಾನ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆಗೆ ದೊಡ್ಡ ಸ್ಥಾನ ಸಿಕ್ಕಿದೆ. ಮುಂದೆ ಅವರು ಪ್ರಧಾನಿಯಾದರೂ ಆಗಬಹುದು. ರಾಜ್ಯದಲ್ಲಿ ಜಿ. ಪರಮೇಶ್ವರ್ ಅವರಿಗೂ ಒಳ್ಳೆಯ ಸ್ಥಾನ ಸಿಕ್ಕಿದೆ ಎಂದು ಆಂಜನೇಯ ಹೇಳಿದ್ದಾರೆ.