Webdunia - Bharat's app for daily news and videos

Install App

ಮೋದಿ ಮತ್ತು ಅಮಿತ್ ಶಾಗೆ ಪ್ರಚಂಡ ಗೆಲುವಿನ ವಿಶ್ವಾಸ...!

geetha
ಸೋಮವಾರ, 12 ಫೆಬ್ರವರಿ 2024 (20:01 IST)
ನವದೆಹಲಿ-ಈ ಬಾರಿ ಮತ್ತೆ ಶಕ್ತಿಕೇಂದ್ರದಲ್ಲಿ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದದ್ದೇ ಆದರೆ ಸತತ ಮೂರನೇ ಅವಧಿಗೂ ಮೋದಿಯೇ ಪ್ರಧಾನಿ ಆಗೋದು. ಕೇಂದ್ರ ಗೃಹಸಚಿವರಾಗಿರುವ ಬಿಜೆಪಿಯ ಪಾಲಿಗೆ ಚುನಾವಣಾ ತಂತ್ರಗಾರಿಕೆಯ ಆಧಾರಸ್ತಂಭವೇ ಆಗಿರುವ ಅಮಿತ್ ಶಾ ಅವರೇ ಇಂತಹದೊAದು ಪ್ರಚಂಡ ಆತ್ಮವಿಶ್ವಾಸದಲ್ಲಿದ್ದಾರೆ.ಮೋದಿಯ ಅಲೆ, ಹವಾ ಜನಪ್ರಿಯತೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ ಇನ್ನೊಂದು ಕಡೆಯಿಂದ ಚಾಣಕ್ಯ ಅಮಿತ್ ಶಾ ಅವರ ಚುನಾವಣಾ ಗೆಲ್ಲುವ ತಂತ್ರಗಾರಿಕೆಯ ಅಸ್ತçವೂ ಅಷ್ಟೇ ಮುಖ್ಯವಾಗಿದೆ.

ಒಂಥಾರಾ ಮೋದಿ ಮತ್ತು ಅಮಿತ್ ಶಾ ದೇಶದ ಬಿಜೆಪಿಗೆ ಪ್ರಬಲ ಸೇನಾನಿಗಳಿದ್ದಂತೆ ಮೋದಿ ಮತ್ತು ಅಮಿತ್ ಶಾ ಗುಜರಾತ್ ರಾಜಕಾರಣದಲ್ಲಿ ಅಕ್ಷರಶಃ ಮೋಡಿ ಮಾಡಿ ಬಂದವರು. ಅದೇ ರೀತಿಯಾಗಿಯೇ ಎರಡು ಟರ್ಮ್ಗಳಲ್ಲಿಯೂ ದೇಶದ ರಾಜಕಾರಣದಲ್ಲಿ ಇದೇ ಬಿಜೆಪಿಯ ಪಾರ್ಟಿಯ ಗೆಲುವಿಗಾಗಿ ಶ್ರಮಿಸಿ, ಇದೀಗ ಮೂರನೇ ಬಾರಿಗೂ ಮತ್ತೆ ಶಕ್ತಿಕೇಂದ್ರದಲ್ಲಿ ದರ್ಬಾರ್ ನಡೆಸುವ ಸಂಕಲ್ಪ ತೊಟ್ಟಿದ್ದಾರೆ.

ದೇಶದಲ್ಲಿ ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ. ಮೋದಿ ಮತ್ತು ಅಮಿತ್ ಶಾ ಜೋಡಿ ಅಖಾಡಕ್ಕೆ ಇಳಿತು ಅಂದ್ರೆ, ಅಲ್ಲಿಂದಲೇ ಬಿಜೆಪಿಯ ಗೆಲುವಿನ ಟ್ರಂಪ್ ಕಾರ್ಡ್ ಅರ್ಧ ವರ್ಕೌಟ್ ಆದಂತೆಯೇ ಯಾಕಂದ್ರೆ ಎರಡು ಅವಧಿಗೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಹುಪಾಲು ಕ್ರೆಡಿಟ್ ಈ ಜೋಡಿಗೆ ಸಲ್ಲುತ್ತೆ.ಬರೀ ಶಕ್ತಿಕೇಂದ್ರದಲ್ಲಿ ಮಾತ್ರ ಬಿಜೆಪಿಯನ್ನ ಗೆಲ್ಲಿಸೋದಷ್ಟೇ ಈ ಗುಜರಾತಿನ ಪ್ರಚಂಡ ಜೋಡೇತ್ತುಗಳ ಸಾಹಸವಲ್ಲ.. ಬದಲಾಗಿ ಇಡೀ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಜೋಡಿ ಗೆಲುವಿನ ಮ್ಯಾಜಿಕ್ ಮಾಡಿದ್ದಿದೆ ಅದರಲ್ಲೂ ಮುಖ್ಯವಾಗಿ ಉತ್ತರಭಾರತದ ಆಲ್‌ಮೊಸ್ಟ್ ರಾಜ್ಯಗಳನ್ನು ಕೇಸರಿಕರಣ ಮಾಡಿದ ಕೀರ್ತಿ ಈ ಚುನಾವಣಾ ಚಾಣಕ್ಯರಿಗೆ ಸಲ್ಲುತ್ತೆ.

ಮತ್ತೆ ಲೋಕಸಭಾ ಚುನಾವಣಾ ಅಖಾಡಕ್ಕೆ ವೇದಿಕೆ ಸಜ್ಜಾಗ್ತಿದೆ.. ಇನ್ನೇನು ದಿನಗಣನೆ ಮಾತ್ರ ಬಾಕಿ ಇದೆಯಷ್ಟೇ ಚುನಾವಣಾ ಆಯೋಗ ಎಲೆಕ್ಷನ್ ಡೇಟ್ ಅನೌನ್ಸ್ ಮಾಡೋದಕ್ಕೆ. ಹಾಗಾಗಿ ಈಗಿನಿಂದಲೇ ಬಿಜೆಪಿಯಲ್ಲಿ ೪೦೦ ಪ್ಲಸ್ ಸೀಟ್‌ಗಳನ್ನು ಗೆದ್ದುಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಮೋದಿ ಮತ್ತು ಅಮಿತ್ ಶಾ ಜೋಡಿ ಹಲವು ಗೇಮ್‌ಪ್ಲಾನ್‌ಗಳನ್ನು ಸಿದ್ದಪಡಿಸುತ್ತಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments