Select Your Language

Notifications

webdunia
webdunia
webdunia
webdunia

ಬಾಂಬ್ ಬಾಂಬ್.. ಎಂದು ಕಿರುಚಿದ್ದಕ್ಕೆ ಮಾಡೆಲ್ ಗೆ ಶಿಕ್ಷೆ!

ಬಾಂಬ್ ಬಾಂಬ್.. ಎಂದು ಕಿರುಚಿದ್ದಕ್ಕೆ ಮಾಡೆಲ್ ಗೆ ಶಿಕ್ಷೆ!
Mumbai , ಶನಿವಾರ, 4 ಮಾರ್ಚ್ 2017 (10:53 IST)
ಮುಂಬೈ: ವಿಮಾನ ನಿಲ್ದಾಣಕ್ಕೆ ಬಂದ ಆ ಮಾಡೆಲ್ ಇದ್ದಕ್ಕಿದ್ದಂತೆ ಬಾಂಬ್ ಬಾಂಬ್ ಎಂದು ಕಿರುಚತೊಡಗಿದಳು. ನನ್ನ ಫ್ರೆಂಡ್ ನ ಬ್ಯಾಗ್ ನಲ್ಲಿ ಬಾಂಬ್ ಇದೆ. ಚೆಕ್ ಮಾಡಿ ಎಂದು ಭದ್ರತಾ ಅಧಿಕಾರಿಗಳನ್ನು ಕರೆದಳು. ಇದಕ್ಕೀಗ ಆಕೆ ತಕ್ಕ ಶಾಸ್ತಿ ಅನುಭವಿಸುತ್ತಿದ್ದಾಳೆ.


ಹೀಗೇ ಸುಮ್ಮ ಸುಮ್ಮನೇ ಅಧಿಕಾರಿಗಳನ್ನು ಕರೆದಿದ್ದಲ್ಲದೆ, ಅವರೊಂದಿಗೆ ವಾಗ್ವಾದಕ್ಕಿಳಿದಳು. ಇದರಿಂದಾಗಿ ದೆಹಲಿಗೆ ತೆರಳಬೇಕಿದ್ದ ವಿಮಾನ ಒಂದು ಗಂಟೆ ತಡವಾಯಿತು. ಅಲ್ಲಿದ್ದವರಿಗೆಲ್ಲಾ ಫುಲ್ ಗಾಬರಿ! ಆದರೆ ಹುಡುಕಿದಾಗ ಏನೂ ಇರಲಿಲ್ಲ. ಇದೆಲ್ಲಾ ಆಕೆ ಸುಮ್ಮನೇ ತಮಾಷೆಗೆ ಮಾಡಿದ್ದು ಎಂದು ಗೊತ್ತಾಯಿತು.

ಈ ರೀತಿ ಸುಮ್ಮನೇ ಮಾಡಿದ ತಪ್ಪಿಗೆ ಆಕೆಯನ್ನು ಬಂಧಿಸಿ ನಂತರ ಬೇಲ್ ನಲ್ಲಿ ಬಿಡುಗಡೆಗೊಳಿಸಲಾಯಿತು. ನಾನು ಸುಮ್ಮನೇ ಗೆಳತಿಯ ಜತೆ ಬಾಂಬ್ ಎಂದು ತಮಾಷೆ ಮಾಡುತ್ತಿದ್ದೆ. ಆದರೆ ಅಷ್ಟರಲ್ಲೇ ಅದು ಭದ್ರತಾ ಅಧಿಕಾರಿಗಳ ಕಿವಿಗೆ ಬೀಳಬೇಕೇ ಎಂದು ಮಾಡೆಲ್ ಅಲವತ್ತುಕೊಂಡಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ಬಗ್ಗೆ ಇನ್ನೊಂದು ಬಾಂಬ್ ಸಿಡಿಸಿದ ಪನೀರ್ ಸೆಲ್ವಂ