Select Your Language

Notifications

webdunia
webdunia
webdunia
webdunia

ಅಪ್ಪ ಕರುಣಾನಿಧಿಗೆ ಪುತ್ರ ಸ್ಟಾಲಿನ್ ಬರೆದ ಕೊನೆಯ ಪತ್ರದಲ್ಲಿ ಏನಿದೆ ಗೊತ್ತಾ?!

ಅಪ್ಪ ಕರುಣಾನಿಧಿಗೆ ಪುತ್ರ ಸ್ಟಾಲಿನ್ ಬರೆದ ಕೊನೆಯ ಪತ್ರದಲ್ಲಿ ಏನಿದೆ ಗೊತ್ತಾ?!
ಚೆನ್ನೈ , ಬುಧವಾರ, 8 ಆಗಸ್ಟ್ 2018 (11:23 IST)
ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಪ್ರೀತಿಯ ಪುತ್ರ ಎಂಕೆ ಸ್ಟಾಲಿನ್. ತಮ್ಮ ಉತ್ತರಾಧಿಕಾರಿ ಎಂದೇ ಸ್ಟಾಲಿನ್ ರನ್ನು ಕರುಣಾನಿಧಿ ಕರೆದಿದ್ದರು.
 

ಇದೀಗ ತಂದೆಯ ಸಾವಿನಿಂದ ತೀವ್ರ ದುಃಖಕ್ಕೊಳಗಾಗಿರುವ ಸ್ಟಾಲಿನ್ ಅಪ್ಪನ ಬಗ್ಗೆ ಭಾವನಾತ್ಮಕವಾಗಿ ಒಂದು ವಿದಾಯ ಪತ್ರ ಬರೆದಿದ್ದಾರೆ. ಕೊನೆಯ ಬಾರಿಗೆ ಒಮ್ಮೆ ನಿಮ್ಮನ್ನು ಅಪ್ಪ ಎಂದು ಕರೆಯಲೇ? ಎಂದು ಸ್ಟಾಲಿನ್ ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ನಾನು ನಿಮ್ಮನ್ನು ತಲೈವರ್ (ಹಿರಿಯ) ಎಂದೇ ಕರೆಯುತ್ತಿದ್ದ. ನನಗಿಂತ ಅದೆಷ್ಟೋ ಪಾಲು ಹಿರಿಯ ನೀವು. ನಿಮ್ಮನ್ನು ಕೊನೆಯ ಬಾರಿಗೆ ಒಮ್ಮೆ ಅಪ್ಪ ಎಂದು ಕರೆಯಲೇ?’ ಎಂದು ಸ್ಟಾಲಿನ್ ತಮಿಳಿನಲ್ಲಿ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಅಪ್ಪನ ಜತೆಗಿನ ತಮ್ಮ ಒಡನಾಟದ ಬಗ್ಗೆ ಸ್ಟಾಲಿನ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಕರುಣಾನಿಧಿ ಅಂತ್ಯಕ್ರಿಯೆ ವಿವಾದ ಅಂತ್ಯ