ಪುಣೆ: ತಂದೆ, ಸಹೋದರನೆಂದರೆ ಮಹಿಳೆಗೆ ರಕ್ಷಣೆ ಒದಗಿಸಬೇಕಾದವರು. ಆದರೆ ಅವರೇ ಭಕ್ಷಕರಾದರೆ ಆ ಯುವತಿಯ ಸ್ಥಿತಿ ಏನಾಗಬೇಡ? ಪುಣೆಯಲ್ಲಿ ಇಂತಹದ್ದೇ ಒಂದು ಧಾರುಣ ಘಟನೆ ನಡೆದಿದೆ.
11 ವರ್ಷದ ಬಾಲಕಿ ಮೇಲೆ ಆಕೆಯ ತಂದೆ, ಸಹೋದರನೇ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ಘಟನೆ ಬಯಲಿಗೆ ಬಂದಿದೆ. ಜೊತೆಗೆ ಆಕೆಯ ತಾತ ಮತ್ತು ಸಂಬಂಧಿಕರೊಬ್ಬರೂ ಆಕೆಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಶಾಲೆಯಲ್ಲಿ ಶಿಕ್ಷಕಿ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಹೇಳುವಾಗಿ ಬಾಲಕಿ ತನಗೆ ತಂದೆ ಮತ್ತು ಸಹೋದರನಿಂದ ಆಗುತ್ತಿದ್ದ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಳಿಕ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.