Select Your Language

Notifications

webdunia
webdunia
webdunia
webdunia

ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಸಹಪಾಠಿ, ಸ್ನೇಹಿತರ ಗ್ಯಾಂಗ್ ರೇಪ್

minor girl
ನವದೆಹಲಿ: , ಸೋಮವಾರ, 29 ಆಗಸ್ಟ್ 2016 (19:34 IST)
ಈಶಾನ್ಯ ದೆಹಲಿಯ ಜಾಮಿಯಾ ನಗರದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅವಳ 16 ವರ್ಷದ ಸಹಪಾಠಿ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ ಪೈಶಾಚಿಕ ಕೃತ್ಯ ಸಂಭವಿಸಿದೆ. ಅತ್ಯಾಚಾರದ ದೃಶ್ಯವನ್ನು ಚಿತ್ರೀಕರಿಸಿಕೊಂಡ ಸಹಪಾಠಿ ಅದನ್ನು ಬ್ಲಾಕ್‌ಮೇಲ್ ಮಾಡಲು ಕೂಡ ಬಳಸಿಕೊಂಡ.
 
ಸಹಪಾಠಿಯು ಬಾಲಕಿಯ ಜತೆ ಪ್ರೇಮಸಂಬಂಧ ಹೊಂದಿದ್ದನೆಂದು ತಿಳಿದುಬಂದಿದ್ದು, ಅವನನ್ನು ಬಂಧಿಸಲಾಗಿದೆ. ರೇಪ್ ಮಾಡಿದ ಬಳಿಕ ವಿಡಿಯೊ ಚಿತ್ರ ತೆಗೆದಿದ್ದ ಆರೋಪಿ ತನ್ನ ಬೇಡಿಕೆಗಳಿಗೆ ಮಣಿಯದಿದ್ದರೆ ವಿಡಿಯೊ ಬಟಾಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದ. 
 
ಆರೋಪಿಯು ಅಪ್ರಾಪ್ತೆಯನ್ನು ನಗರದ ಅನೇಕ ಕಡೆ ಕರೆದುಕೊಂಡು ಹೋಗಿ, ಸ್ನೇಹಿತರ ಜತೆ ಅನೇಕ ಬಾರಿ ರೇಪ್ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಸೆಂಬ್ಲಿ ಮುಟ್ಟಲು 110 ಕಿಮೀ ದೂರ ಸೈಕಲ್ ಪೆಡಲ್ ತುಳಿದ ಹರ್ಯಾಣ ಶಾಸಕ