Select Your Language

Notifications

webdunia
webdunia
webdunia
webdunia

ಅಸೆಂಬ್ಲಿ ಮುಟ್ಟಲು 110 ಕಿಮೀ ದೂರ ಸೈಕಲ್ ಪೆಡಲ್ ತುಳಿದ ಹರ್ಯಾಣ ಶಾಸಕ

ಅಸೆಂಬ್ಲಿ ಮುಟ್ಟಲು 110 ಕಿಮೀ ದೂರ ಸೈಕಲ್ ಪೆಡಲ್ ತುಳಿದ ಹರ್ಯಾಣ ಶಾಸಕ
ಚಂಡೀಗಢ: , ಸೋಮವಾರ, 29 ಆಗಸ್ಟ್ 2016 (19:12 IST)
ಆಡಳಿತಾರೂಢ ಬಿಜೆಪಿ ಶಾಸಕ ಪವನ್ ಕುಮಾರ್ ಸೈನಿ ಉತ್ತಮ ಆರೋಗ್ಯಕ್ಕೆ ಮತ್ತು ಪರಿಸರ ಸಂರಕ್ಷಣೆಗೆ ಸೈಕ್ಲಿಂಗ್ ಮಾಡಿ ಎಂಬ ಸಂದೇಶವನ್ನು ಮುಟ್ಟಿಸಲು ತಮ್ಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ 110 ಕಿಮೀ ಸೈಕಲ್ ಪೆಡಲ್ ಮಾಡುವ ಸಾಹಸ ಮಾಡಿದರು.
 
 
45 ವರ್ಷದ ಸೈನಿ ತಮ್ಮ ಸ್ವಕ್ಷೇತ್ರದಿಂದ ಹರ್ಯಾಣ ವಿಧಾನಸಭೆಗೆ ಇನ್ನೂ 10 ಮಂದಿ ಕಾರ್ಯಕರ್ತರ ಜತೆ ಸೈಕಲ್‌ನಲ್ಲಿ ಆಗಮಿಸಿದ್ದರು. ನಾವು ಕುರುಕ್ಷೇತ್ರವನ್ನು ಬೆಳಿಗ್ಗೆ 5.20ಕ್ಕೆ ಬಿಟ್ಟು ಚಂದೀಗಢವನ್ನು ಮಧ್ಯಾಹ್ನ 1.45ಕ್ಕೆ ತಲುಪಿ ಸುಮಾರು 110 ಕಿಮೀ ಸೈಕ್ಲಿಂಗ್ ಮಾಡಿದೆವು. ವಿಧಾನಸಭೆ ಸಮೀಪ ಬಂದಾಗ ಭದ್ರತಾ ಅಧಿಕಾರಿಗಳು ಒಳಬಿಡಲಿಲ್ಲ. ಆದರೆ ಶಾಸಕರೆಂದು ತಿಳಿದ ಬಳಿಕ ತಮ್ಮನ್ನು ಒಳಬಿಟ್ಟಿದ್ದಾಗಿಯೂ ಉಳಿದ ಪಕ್ಷದ ಕಾರ್ಯಕರ್ತರಿಗೆ ಅಸೆಂಬ್ಲಿ ಗೇಟ್ ತನಕ ಜತೆಗೂಡಲು ನಾನು ಅನುಮತಿ ಪಡೆದಿದ್ದಾಗಿ ಸೈನಿ ಹೇಳಿದರು.
 
ಲಾಡ್ವಾ ಕ್ಷೇತ್ರದ ಮೊದಲ ಬಾರಿ ಶಾಸಕ, ನಮ್ಮ ದಟ್ಟಣೆಯ ವೇಳಾಪಟ್ಟಿಯಿಂದ ವ್ಯಾಯಾಮಕ್ಕೆ ಸಮಯ ಇರುವುದಿಲ್ಲ. ಸೈಕ್ಲಿಂಗ್ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪರಿಸರ ಸ್ನೇಹಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೆ ಮುನ್ನ ಪತ್ರಕರ್ತರ ಓಲೈಕೆಗೆ ಗೃಹನಿರ್ಮಾಣ ಯೋಜನೆ