Select Your Language

Notifications

webdunia
webdunia
webdunia
webdunia

ಚುನಾವಣೆಗೆ ಮುನ್ನ ಪತ್ರಕರ್ತರ ಓಲೈಕೆಗೆ ಗೃಹನಿರ್ಮಾಣ ಯೋಜನೆ

ಚುನಾವಣೆಗೆ ಮುನ್ನ ಪತ್ರಕರ್ತರ ಓಲೈಕೆಗೆ ಗೃಹನಿರ್ಮಾಣ ಯೋಜನೆ
ಲಖನೌ , ಸೋಮವಾರ, 29 ಆಗಸ್ಟ್ 2016 (19:03 IST)
ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಪ್ರದೇಶ ಸರ್ಕಾರ ಓಲೈಕೆ ತಂತ್ರದಲ್ಲಿ ಮುಳುಗಿದೆ. ಉತ್ತರಪ್ರದೇಶದ ಪತ್ರಕರ್ತರನ್ನು ಓಲೈಸಲು ಹೊಸ ಗೃಹನಿರ್ಮಾಣ ಯೋಜನೆಯನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಕಟಿಸಿದ್ದಾರೆ. 
 
 ಸರ್ಕಾರಿ ಕ್ವಾರ್ಟರ್‌ಗಳಲ್ಲಿ ವಾಸಿಸುವ 500ಕ್ಕೂ ಹೆಚ್ಚು ಪತ್ರಕರ್ತರಿಗೆ 15 ದಿನಗಳಲ್ಲಿ ತೆರವು ಮಾಡುವಂತೆ ಸೂಚಿಸಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. ಏಕ್ ಘರ್ ಹೊ ಅಪ್ನಾ ಕನಸನ್ನು ನನಸು ಮಾಡಲು ಈ ಯೋಜನೆಯನ್ನು ಪ್ರಕಟಿಸಿದ್ದು, ಸರ್ಕಾರದ ನಾಲ್ಕುವರೆ ವರ್ಷಗಳ ಅವಧಿಯಲ್ಲೇ ಇದು ಪ್ರಥಮ ಎಂದು ಅಖಿಲೇಶ್ ಹೇಳಿದರು. 
 
ರಾಜಸ್ಥಾನ ಮತ್ತು ಮಧ್ಯಪ್ರದೇಶಗಳೂ ಪತ್ರಕರ್ತರಿಗೆ ಗೃಹನಿರ್ಮಾಣ ಯೋಜನೆ ಪ್ರಕಟಿಸಿದ್ದವು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಖಿಲೇಶ್ ಗೃಹನಿರ್ಮಾಣ ಯೋಜನೆ ಪ್ರಕಟಿಸಿದ್ದು ಅನೇಕ ಮಂದಿಯ ಹುಬ್ಬೇರಿಸಿದೆ. ಪತ್ರಕರ್ತರ ಓಲೈಕೆ ಮೂಲಕ ಮಧುರ ಸಂಬಂಧ ಬೆಸೆಯುವ ಪ್ರಯತ್ನ ಎಂದು ವಿರೋಧ ಪಕ್ಷಗಳು ಈ ನಡೆಯನ್ನು ಭಾವಿಸಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಜಿಲೆಂಡ್: ದ್ರೋಣ್‌ನಿಂದ ಪಿಜ್ಜಾ ವಿತರಣೆ ಸೇವೆ ಆರಂಭ