Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್: ದ್ರೋಣ್‌ನಿಂದ ಪಿಜ್ಜಾ ವಿತರಣೆ ಸೇವೆ ಆರಂಭ

ನ್ಯೂಜಿಲೆಂಡ್:  ದ್ರೋಣ್‌ನಿಂದ ಪಿಜ್ಜಾ ವಿತರಣೆ ಸೇವೆ ಆರಂಭ
ನ್ಯೂಜಿಲೆಂಡ್ , ಸೋಮವಾರ, 29 ಆಗಸ್ಟ್ 2016 (18:50 IST)
ನ್ಯೂಜಿಲ್ಯಾಂಡ್‌ನಲ್ಲಿ ಪಿಜ್ಜಾ ಪ್ರೇಮಿಗಳು ಬಹು ಸಂಖ್ಯೆಯಲ್ಲಿದ್ದು, ಪಿಜ್ಜಾ ಹಟ್‌ಗಳು ವಿಶ್ವದಲ್ಲಿಯೇ ಮೊದಲ ಬಾರಿಗೆ ಪಿಜ್ಜಾ ಪ್ರೀಯರಿಗೆ ದ್ರೋಣ್ ಮೂಲಕ ಪಿಜ್ಜಾ ವಿತರಿಸುತ್ತಿವೆ ಎಂದು ಸಾರಿಗೆ ಸಚಿವ ಸಿಮೋನ್ ಬ್ರಿಡ್ಜೆಸ್ ಹೇಳಿದ್ದಾರೆ.  
 
ಡೊಮಿನೊ ಪಿಜ್ಜಾ ಎಂಟರ್ಪ್ರೈಸಸ್, ಮಾನವರಹಿತ ಅಂತರಿಕ್ಷ ವಾಹನ (ಯುಎವಿ) ಡೆವಲಪರ್ ಫ್ಲರ್ಟಿ ಕಂಪೆನಿಯೊಂದಿಗೆ ಕೈಜೋಡಿಸಿ ದ್ರೋಣ ವಿತರಣಾ ಸೇವೆಯನ್ನು ಆರಂಭಿಸಿರುವುದನ್ನು ಸ್ವಾಗತಿಸಿದ್ದಾರೆ ಎಂದು ಮಾಧ್ಯಮ ಸಂಸ್ಥೆ ವರದಿ ಮಾಡಿದೆ. 
 
ವೈಮಾನಿಕ ಕ್ಷೇತ್ರದ ನೀತಿಗಳು ಸುರಕ್ಷತೆಯೊಂದಿಗೆ ಸಂಶೋಧನೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಡೋಮಿನೋ ಮತ್ತು ಫ್ಲಿರ್ಟೆ ಕಂಪೆನಿ ನ್ಯೂಜಿಲ್ಯಾಂಡ್ ರಾಷ್ಟ್ರವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ನ್ಯೂಜಿಲ್ಯಾಂಡ್‌ನ ಮನರಂಜನಾ ವಾಣಿಜ್ಯ ಉದ್ದೇಶಗಳಿಗಾಗಿ ಮಾನವರಹಿತ ಅಂತರಿಕ್ಷ ವಾಹನ (ಯುಎವಿ) ಬಳಕೆ ಮಾಡಿಕೊಳ್ಳುವ ಹೊಸ ವಿಮಾನಯಾನ ನಿಯಮಗಳು ಆಗಸ್ಟ್ 2015 ರಲ್ಲಿ ಜಾರಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜವಾದಿ ಪಕ್ಷ ಮುಳುಗುವ ದೋಣಿ: ಸಚಿವ ಆಜಂಖಾನ್