ಲಕ್ನೋ: 17 ವರ್ಷದ ಅಪ್ರಾಪ್ತ ಬಾಲಕಿಯ ಶೀಲಕೆಡಿಸಿ ಆರೋಪಿ ವಿಷ ಹಾಕಿ ಸಾಯಿಸಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ದೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
									
										
								
																	
ಆದರೆ ಪೊಲೀಸರ ಪ್ರಕಾರ ಆರೋಪಿ ಮತ್ತು ಮೃತ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಈ ಸಂಬಂಧವನ್ನು ಒಪ್ಪಿರಲಿಲ್ಲ. ಇದರಿಂದಾಗಿ ಆಕೆ ವಿಷಪ್ರಾಷನ ಮಾಡಿರಬಹುದು ಎಂದಿದ್ದಾರೆ.
									
			
			 
 			
 
 			
			                     
							
							
			        							
								
																	ಆದರೆ ಸಂತ್ರಸ್ತೆಯ ಕುಟುಂಬಸ್ಥರು ಇದನ್ನು ನಿರಾಕರಿಸಿದ್ದು, ನಮ್ಮ ಮಗಳ ತಲೆಕೆಡಿಸಿ ಆರೋಪಿ ಶೀಲಕೆಡಿಸಿದ್ದಲ್ಲದೆ, ಆಕೆಗೆ ವಿಷ ಕೊಟ್ಟು ಸಾಯಿಸಿ ಅಜ್ಞಾತ ಸ್ಥಳದಲ್ಲಿ ಮೃತದೇಹ ಬಿಸಾಕಿದ್ದಾನೆ ಎಂದಿದ್ದಾರೆ. ಪೊಲೀಸರು ಇದೀಗ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.