Publish Date: Mon, 01 Oct 2018 (09:40 IST)
Updated Date: Mon, 01 Oct 2018 (09:42 IST)
ಸೂರತ್: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನೊಬ್ಬ ತನ್ನ ದುಷ್ಕೃತ್ಯದ ಬಳಿಕ ಆಕೆಯನ್ನು ಪೈಪ್ ಒಂದರಲ್ಲಿ ತುರುಕಿ ಕ್ರೌರ್ಯ ಮೆರೆದಿದ್ದಾನೆ.
ಗುಜರಾತ್ ನ ಸೂರತ್ ನಲ್ಲಿ ಈ ನೀಚ ಕೃತ್ಯ ನಡೆದಿದೆ. 19 ವರ್ಷದ ನೆರೆಮನೆಯ ಯುವಕನೇ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಬಾಲಕಿ ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಾನು ನಡೆಸಿದ ನೀಚ ಕೃತ್ಯ ಬಾಯ್ಬಿಟ್ಟಿದ್ದಾನೆ. ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಬೃಹತ್ ಪೈಪ್ ಒಂದರಲ್ಲಿ ಆಕೆ ಪ್ರಜ್ಞಾಹೀನ ಮತ್ತು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.