ಅತ್ಯಾಚಾರ ವಿಚಾರ ಬಹಿರಂಗವಾಗುತ್ತಿದ್ದಂತೇ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಯುವತಿ

Webdunia
ಬುಧವಾರ, 7 ಸೆಪ್ಟಂಬರ್ 2022 (08:40 IST)
ನವದೆಹಲಿ: ತನ್ನ ಮೇಲೆ ನಡೆದಿದ್ದ ಅತ್ಯಾಚಾರ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ ಮಾನಕ್ಕೆ ಅಂಜಿ 16 ವರ್ಷದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉತ್ತರಪ್ರದೇಶದ ಬರೇಲಿಯ 16 ವರ್ಷದ ಯುವತಿ ಮೇಲೆ ಅದೇ ಗ್ರಾಮದ 22 ವರ್ಷದ ಯುವಕ ಅತ್ಯಾಚಾರವೆಸಗಿದ್ದ. ಯುವತಿ ಈ ವಿಚಾರವನ್ನು ಮೊದಲು ಯಾರಿಗೂ ಹೇಳಿರಲಿಲ್ಲ. ಬಳಿಕ ಧೈರ್ಯ ಮಾಡಿ ತನ್ನ ಸಹೋದರನಿಗೆ ಹೇಳಿದ್ದಳು. ಹಾಗಿದ್ದರೂ ಮಾನ ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ.

ಇದಾದ ಬಳಿಕ ಆರೋಪಿ ದೆಹಲಿಗೆ ಪರಾರಿಯಾಗಿದ್ದ. ಇತ್ತೀಚೆಗೆ ಗ್ರಾಮದಲ್ಲಿದ್ದ ತನ್ನ ಸ್ನೇಹಿತನಿಗೆ ಕರೆ ಮಾಡಿದಾಗ ತಾನು ಮಾಡಿದ್ದ ಕುಕೃತ್ಯವನ್ನು ವಿವರಿಸಿದ್ದ. ಈ ವೇಳೆ ಆ ಸ್ನೇಹಿತ ಕರೆ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ಆ ಅಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದ. ಇದು ಬಹಿರಂಗವಾಗುತ್ತಿದ್ದಂತೇ ಯುವತಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಯುವತಿಯ ಸಹೋದರ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಲು ಮತ್ತೊಂದು ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ನಿಮ್ಮ ಸಿಎಂ ಯುದ್ಧಕ್ಕೆ ಬಿಜೆಪಿ ಹೇಗೆ ಕಾರಣವಾಗುತ್ತೆ: ರಣದೀಪ್ ಸುರ್ಜೇವಾಲಗೆ ಆರ್ ಅಶೋಕ್ ಪ್ರಶ್ನೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ತೇಜಸ್ ಯುದ್ಧ ವಿಮಾನ ಪತನವಾದಾಗ ನಕ್ಕ ಪಾಕಿಸ್ತಾನಿಯರು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments