Select Your Language

Notifications

webdunia
webdunia
webdunia
webdunia

ಜವಹರಲಾಲ್ ನೆಹರೂ ದಾಖಲೆಗಳ ಪೆಟ್ಟಿಗೆಗಳು ಸೋನಿಯಾ ಗಾಂಧಿ ಬಳಿ: ಸಂಸತ್ ನಲ್ಲಿ ಸಚಿವ ಗಜೇಂದ್ರ ಸಿಂಗ್ ಬಾಂಬ್

Nehru-Sonia Gandhi

Krishnaveni K

ನವದೆಹಲಿ , ಗುರುವಾರ, 18 ಡಿಸೆಂಬರ್ 2025 (12:22 IST)
ನವದೆಹಲಿ: ಜವಹರಲಾಲ್ ನೆಹರೂ ಅವರಿಗೆ ಸೇರಿದ ದಾಖಲೆಗಳನ್ನು ಒಳಗೊಂಡ 15 ಪೆಟ್ಟಿಗೆಗಳು ಸೋನಿಯಾ ಗಾಂಧಿ ಬಳಿಯಿದೆ. ಆದರೆ ಅವರು ಇನ್ನೂ ಇದನ್ನು ಸರ್ಕಾರಕ್ಕೆ ಒಪ್ಪಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಸಂಸದ ಸಂಬಿತ್ ಪಾತ್ರಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಜೇಂದ್ರ ಸಿಂಗ್, ನೆಹರೂ ಅವರಿಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿಲ್ಲ. ಆದರೆ ಇವೆಲ್ಲವೂ ಸೋನಿಯಾ ಬಳಿಯಿದೆ. ಆದರೆ ಇದನ್ನು ಮರಳಿಸುವಂತೆ ಕಳೆದ ಜನವರಿಯಲ್ಲಿ ಸೋನಿಯಾಗೆ ಕೇಳಿಕೊಳ್ಳಲಾಗಿತ್ತು. ಆದರೆ ಅವರು ಇದುವರೆಗೆ ಮರಳಿಸಿಲ್ಲ.

ಪಂಡಿತ್ ನೆಹರೂ ಅವರ ಖಾಸಗಿ ಕುಟುಂಬ ಪತ್ರಗಳು, ದಾಖಲೆಗಳನ್ನು ಹಿಂದಿರುಗಿಸುವಂತೆ 2008 ರಲ್ಲಿ ಸೋನಿಯಾ ಗಾಂಧಿಯವರ ಪ್ರತಿನಿಧಿ ಎಂವಿ ರಾಜನ್ ಮನವಿ ಮಾಡಿದ್ದರು. ಅದರಂತೆ ಅಂದಿನ ಸರ್ಕಾರುವ ನೆಹರು ಅವರ ಖಾಸಗಿ ದಾಖಲೆಗಳ 51 ಪೆಟ್ಟಿಗೆಗಳನ್ನು ಸೋನಿಯಾ ಗಾಂಧಿಯವರಿಗೆ ಹಸ್ತಾಂತರಿಸಿದೆ.

ನೆಹರೂ ಮ್ಯೂಸಿಯಂನಿಂದ ಅವರ ಕೆಲವು ಪತ್ರಗಳು, ದಾಖಲೆಗಳು ಕಾಣೆಯಾಗಿವೆ ಎಂಬುದು ಈ ಹಿಂದೆ ಭಾರೀ ಚರ್ಚೆಯಾಗಿತ್ತು. ಇದೀಗ ಆ ದಾಖಲೆಗಳು ಯಾವುದೂ ಕಾಣೆಯಾಗಿಲ್ಲ. ಎಲ್ಲವೂ ಸೋನಿಯಾ ಬಳಿಯಿದೆ. ಈ ಬಗ್ಗೆ ಜನವರಿ 2025 ರಲ್ಲಿ ಇದೆಲ್ಲವೂ ಸರ್ಕಾರದ ಸೊತ್ತು. ಇದನ್ನು ಇತಿಹಾಸಕಾರರು, ಸಂಶೋಧಕರು ಓದಬೇಕು. ಹೀಗಾಗಿ ಮರಳಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೆ ಸೋನಿಯಾ ಇದನ್ನು ಮರಳಿಸಿಲ್ಲ ಎಂದು ಸಚಿವ ಗಜೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಸೋನಿಯಾ ಮತ್ತು ಕುಟುಂಬ ದೇಶದ ಜನರಿಂದ ಏನನ್ನು ಮುಚ್ಚಿಡಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮನಸ್ಸು ಮಾಡಿದ್ರೆ ತುಳಿಯಬಹುದಿತ್ತು: ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸ್ಪೋಟಕ ಹೇಳಿಕೆ