Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ವಿರುದ್ಧ ಸಚಿವ ಅಮಿತ್ ಶಾ ವ್ಯಂಗ್ಯ?

webdunia
ಭಾನುವಾರ, 11 ಸೆಪ್ಟಂಬರ್ 2022 (09:19 IST)
ಜೈಪುರ್ : ವಿದೇಶಿ ಟೀ-ಶರ್ಟ್ ಧರಿಸಿ, ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
 
‘ಭಾರತ್ ಜೋಡೋ ಯಾತ್ರೆ’ ವೇಳೆ ಹಣದುಬ್ಬರ ವಿಷಯವನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ ಅವರು ಸ್ವತಃ ವಿದೇಶಿ ಬ್ರ್ಯಾಂಡ್ನ 41,257 ರೂ. ಮೌಲ್ಯದ ಟೀ ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾಲೆಳೆದಿತ್ತು.

ಇದು ಕಾಂಗ್ರೆಸ್  ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೇ ವೇಳೆ ಅಮಿತ್ ಶಾ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರು ವಿದೇಶಿ ಟೀ-ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದಾರೆ. ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ನೆನಪಿಸುತ್ತೇನೆ.

ರಾಹುಲ್ ಬಾಬಾ ʻಭಾರತ ರಾಷ್ಟ್ರವಲ್ಲʼ ಎಂದು ಹೇಳಿದ್ದರು. ರಾಹುಲ್ ಗಾಂಧಿ, ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ಇದು ಲಕ್ಷಗಟ್ಟಲೆ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರವಾಗಿದೆ.
ರಾಹುಲ್ ಗಾಂಧಿ ಅವರು ಭಾರತದ ಇತಿಹಾಸವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಜೋಧ್ಪುರದಲ್ಲಿ ನಡೆದ ಬೂತ್ ಅಧ್ಯಕ್ಷ ಸಂಕಲ್ಪ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುವಾಗ ಶಾ ತಿಳಿಸಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲ್ಸ್ ಆಳ್ವಿಕೆಯಲ್ಲಿ ಮುಂದೆ ಏನೆಲ್ಲಾ ಬದಲಾವಣೆ?