Select Your Language

Notifications

webdunia
webdunia
webdunia
webdunia

ಚಾರ್ಲ್ಸ್ ಆಳ್ವಿಕೆಯಲ್ಲಿ ಮುಂದೆ ಏನೆಲ್ಲಾ ಬದಲಾವಣೆ?

ಎಲಿಜಬೆತ್
ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್ನನ್ನು ಅಧಿಕೃತವಾಗಿ ಬ್ರಿಟನ್ನ ರಾಜ ಎಂದು ಶನಿವಾರ ಘೋಷಿಸಲಾಗಿದೆ.
 

ರಾಣಿ ಎಲಿಜಬೆತ್ ನಿಧನದ ಬಳಿಕ ಇದೀಗ ಚಾಲ್ಸ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಬದಲಾವಣೆಯೊಂದಿಗೆ ದೇಶಾದ್ಯಂತ ಹಲವು ಬದಲಾವಣೆಯಾಗಲಿದೆ. ಅವುಗಳಲ್ಲಿ ಮುಖ್ಯವಾದವುಗಳು ಇಲ್ಲಿವೆ.

* ಬ್ರಿಟನ್ ಕರೆನ್ಸಿಯಲ್ಲಿ ಚಾರ್ಲ್ಸ್ ಚಿತ್ರ ಮುದ್ರಿಸಲಾಗುತ್ತದೆ.
* ರಾಷ್ಟ್ರಗೀತೆಯಲ್ಲಿ `ಗಾಡ್ ಸೇವ್ಸ್ ದಿ ಕ್ವೀನ್’ ಬದಲಿಗೆ `ಗಾಡ್ ಸೇವ್ ಅವರ್ ಪ್ರೀಷಿಯಸ್ ಕಿಂಗ್’ ಎಂದು ಬದಲಾಗಲಿದೆ.
* ಬ್ರಿಟನ್ ಜೊತೆಗೆ ಆಸ್ಟ್ರೇಲಿಯಾ, ಕೆನಡಾದ ರಾಷ್ಟ್ರಗೀತೆ ಬದಲಾಗುತ್ತದೆ.
* ಬ್ರಿಟಿಷ್ ಪಾಸ್ಪೋರ್ಟ್ನಲ್ಲಿ ರಾಣಿ ಸ್ಥಾನದಲ್ಲಿ ರಾಜನ ಚಿತ್ರ ಮುದ್ರಣವಾಗಲಿದೆ.
* ಬ್ರಿಟನ್ ಅಂಚೆ ಚೀಟಿ, ಪೊಲೀಸ್ ಟೋಪಿಯಲ್ಲಿ ರಾಣಿ ಬದಲು ರಾಜನ ಚಿನ್ಹೆ ಇರಲಿದೆ.
* ಬಂಕಿಂಗ್ಹ್ಯಾಮ್ ಅರಮನೆ ಭದ್ರತಾ ಸಿಬ್ಬಂದಿಗೆ ಕ್ವೀನ್ ಗಾರ್ಡ್ಸ್ ಬದಲಾಗಿ ಕಿಂಗ್ ಗಾರ್ಡ್ಸ್ ಹೆಸರಿಸಲಾಗುತ್ತದೆ.
* ಎಲಿಜಬೆತ್ ಬಳಿಯಿದ್ದ ಕೋಹಿನೂರು ವಜ್ರವಿರುವ ಕಿರೀಟ ಕೆಮಿಲ್ಲಾ ಪಾರ್ಕರ್ಗೆ ಹಸ್ತಾಂತರವಾಗಲಿದೆ.
* ಬ್ರಿಟನ್ ರಾಜರಾದವರಿಗೆ ಪಾಸ್ಪೋರ್ಟ್ ಅಗತ್ಯವಿರುವುದಿಲ್ಲ.
* ಅವರ ಹುಟ್ಟುಹಬ್ಬವನ್ನು 2 ದಿನ ಆಚರಿಸಲಾಗುತ್ತದೆ.
* ಬ್ರಿಟನ್ ರಾಜ ಮತದಾನದಲ್ಲಿಯೂ ಪಾಲ್ಗೊಳ್ಳಲಾಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಎನ್ಎಸ್ಎಸ್ ಪಾತ್ರ ಅಪಾರ : ಗೆಹ್ಲೋಟ್