Publish Date: Mon, 18 Jan 2021 (10:34 IST)
Updated Date: Mon, 18 Jan 2021 (10:36 IST)
ಪುಣೆ : ಮಸಾಜ್ ಪಾರ್ಲರ್ ಮಹಿಳೆಯನ್ನು ರಹಸ್ಯವಾಗಿ ವಿಡಿಯೋ ಮಾಡಿದ ಗ್ರಾಹಕರನೊಬ್ಬ ಅದನ್ನು ಇಟ್ಟುಕೊಂಡು ಆಕೆಗೆ ಬೆದರಿಸಿ ಅವಳನ್ನು ಲೈಂಗಿಕತೆಗೆ ಬಳಸಿಕೊಳ್ಳಲು ಯತ್ನಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಮಸಾಜ್ ಪಾರ್ಲರ್ ಗೆ ಬಂದ ವ್ಯಕ್ತಿ ಅಲ್ಲಿ ಮಹಿಳೆ ಮಸಾಜ್ ಮಾಡುವಾಗ ಆಕೆಯನ್ನು ಅಶ್ಲೀಲವಾಗಿ ವಿಡಿಯೋ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ತನ್ನೊಂದಿಗೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವಂತೆ , ಇಲ್ಲವಾದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.