Publish Date: Tue, 02 Mar 2021 (08:59 IST)
Updated Date: Tue, 02 Mar 2021 (09:01 IST)
ಚೆನ್ನೈ : 38 ವರ್ಷದ ಜನಪ್ರಿಯ ಚಿತ್ರ ಟಿವಿ ನಟಿಗೆ ಮದ್ಯಪಾನ ಮಾಡಿದ ಚಾಲಕನೊಬ್ಬ ಕಿರುಕುಳ ನೀಡಿದ ಘಟನೆ ಗೋರೆಗಾಂವ್ ನಲ್ಲಿ ನಡೆದಿದೆ.
ಆಸ್ಪತ್ರೆಯ ಹೊರಗಡೆ ನಟಿ ತನ್ನ ಮಕ್ಕಳೊಂದಿಗೆ ಕಾರಿನಲ್ಲಿದ್ದಾಗ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ನಟಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ನಟಿ ಜೊತೆ ವ್ಯಕ್ತಿ ವಾಗ್ವಾದಕ್ಕಿಳಿದಿದ್ದಾಳೆ. ಆ ವೇಳೆ ಆತ ನಟಿಗೆ ಕಿರುಕುಳ ನೀಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.