Webdunia - Bharat's app for daily news and videos

Install App

Meghalaya Murder Mystery: ಮರಣೋತ್ತರ ಪರೀಕ್ಷೆಯಲ್ಲಿ ಮಹಾಸ್ಫೋಟಕ ಮಾಹಿತಿ ಹೊರಕ್ಕೆ

Sampriya
ಸೋಮವಾರ, 9 ಜೂನ್ 2025 (18:02 IST)
Photo Courtesy X
ಮೇಘಾಲಯ: ದೇಶವನ್ನೇ ಬೆಚ್ಚಿಬೀಳಿಸಿದ ರಾಜಾ ರಘುವಂಶಿ ಕೊಲೆ ಪ್ರಕರಣದ ನಿಗೂಢತೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. 

ಹತ್ಯೆಗೊಳಗಾದ ರಘುವಂಶಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ.  ಪತ್ನಿ ಸೋನಮ್ ಜತೆ ಹನಿಮೂನ್ ಪ್ರವಾಸಕ್ಕಾಗಿ ಮೇಘಾಲಯಕ್ಕೆ ಹೋಗಿದ್ದಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ರಾಜಾ ರಘುವಂಶಿ ಮೇಲೆ ಎರಡು ಬಾರಿ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ.

ಇಂದೋರ್ ಮೂಲದ ಉದ್ಯಮಿಯಾಗಿದ್ದ ರಾಜಾ ರಘುವಂಶಿ, ಗಂಭೀರ ದಾಳಿಯಿಂದ ಸಾವನ್ನಪ್ಪಿದ್ದಾರೆ. ಹತ್ಯೆಗೆ ಸಂಚನ್ನು ಪತ್ನಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ಮತ್ತು ಇತರ ಸಹಾಯಕರು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲೆ ಪ್ರಕರಣವು ದೇಶಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಪ್ರಕರಣ ಸಂಬಂಧ ಪತ್ನಿಯೇ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.  

ಮೂಲಗಳ ಪ್ರಕಾರ, ಅವರ ಆಪಾದಿತ ಪ್ರೇಮಿಯೇ ಕೊಲೆ ಸಂಚಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಸೋನಮ್ ಮತ್ತು ರಾಜ್ ಹೊರತುಪಡಿಸಿ, ಪ್ರಕರಣದಲ್ಲಿ ಹೆಸರಿಸಲಾದ ಇತರ ಮೂವರು - ವಿಕಿ ಠಾಕೂರ್, ಆಕಾಶ್ ಮತ್ತು ಆನಂದ್ - ಈ ಕ್ರೂರ ಹತ್ಯೆಯನ್ನು ಮಾಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಕೇಸ್: ಪೊಲೀಸರಿಗೂ ಸಂಕಷ್ಟ ತಂದಿಟ್ಟ ಎಸ್ಐಟಿ ಆರ್ಡರ್

Video: ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ

ಕೈಲಾಗದ ರಾಹುಲ್ ಗಾಂಧಿ ಮೈ ಪರಚಿಕೊಳ್ತಿದ್ದಾರೆ: ಆರ್ ಅಶೋಕ ವಾಗ್ದಾಳಿ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಸುದೀರ್ಘ ಜೀವನ ಗುಟ್ಟು ಇದುವೇ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments