Select Your Language

Notifications

webdunia
webdunia
webdunia
webdunia

ಪೊಲೀಸರಿಗೆ ಲಂಚ ಕೊಡಲು ಪಿಗ್ಗಿ ಬ್ಯಾಂಕ್‌ ತಂದ ಐದು ವರ್ಷದ ಬಾಲಕಿ

ಪೊಲೀಸರಿಗೆ ಲಂಚ ಕೊಡಲು ಪಿಗ್ಗಿ ಬ್ಯಾಂಕ್‌ ತಂದ ಐದು ವರ್ಷದ ಬಾಲಕಿ
ಲಕ್ನೋ: , ಗುರುವಾರ, 29 ಜೂನ್ 2017 (19:30 IST)
ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಐದು ವರ್ಷದ ಬಾಲಕಿಯೊಬ್ಬಳು ಮೀರತ್ ಜಿಲ್ಲೆಯ ಪೊಲೀಸ್ ಮಹಾನಿರ್ದೇಶಕ  ರಾಮ್ ಕುಮಾರ್ ಅವರ ಕಚೇರಿಗೆ ತೆರಳಿ ಅವರಿಗೆ ತನ್ನ ಪಿಗ್ಗಿ ಬ್ಯಾಂಕ್‌ನ್ನು ಲಂಚವಾಗಿ ಸ್ವೀಕರಿಸುವಂತೆ ಕೋರಿದ್ದಾಳೆ.
ಉತ್ತರಪ್ರದೇಶದ ಮೀರತ್ ಜಿಲ್ಲೆಯ ವಾಸಿಯಾಗಿರುವ ಬಾಲಕಿ ಮಾನ್ವಿ, ತಾಯಿ ಸೀಮಾ ಕೌಶಿಕ್, ಕಳೆದ ಏಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಆಕೆಯ ಕುಟುಂಬದವರು ಅಳಿಯ ಮತ್ತು ಆತನ ಸಂಬಂಧಿಕರು ವರದಕ್ಷಿಣೆಗಾಗಿ ನೀಡಿದ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದರು.    
 
ಮಂಗಳವಾರದಂದು ಐದು ವರ್ಷ ವಯಸ್ಸಿನ ಬಾಲಕಿ ಮಾನ್ವಿ, ತನ್ನ ತಾತ ಶಾಂತಿ ಸ್ವರೂಪ್ ಶರ್ಮಾ ಮತ್ತು ಚಿಕ್ಕಪ್ಪ ರೋಹಿತ್ ಶರ್ಮಾ ಅವರೊಂದಿಗೆ ಪೊಲೀಸ್ ಮಹಾನಿರ್ದೇಶಕ ರಾಮ್‌ಕುಮಾರ್ ಅವರನ್ನು ಭೇಟಿ ನೀಡಿ, ಲಂಚ ಕೊಡದಿದ್ದರೆ ನನ್ನ ತಾಯಿಯ ಪ್ರಕರಣ ಪರಿಹಾರವಾಗುವುದಿಲ್ಲ ಎಂದು ಕೇಳಿದ್ದಾಗಿ ತಿಳಿಸಿದ್ದಾಳೆ.
 
ಹಣವಿಲ್ಲದಿದ್ದರೆ ಯಾವ ಕೆಲಸವು ಆಗುವುದಿಲ್ಲ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಆದ್ದರಿಂದ ನನ್ನ ಪಿಗ್ಗಿ ಬ್ಯಾಂಕ್‌ನಲ್ಲಿರುವ ಹಣವನ್ನು ತೆಗೆದುಕೊಳ್ಳಿ. ನನ್ನ ತಾಯಿ ಆತ್ಮಹತ್ಯೆಗೈಯಲು ಕಾರಣರಾದವರನ್ನು ಬಂಧಿಸಿ ಎಂದು ಪೊಲೀಸ್ ಮಹಾನಿರ್ದೇಶಕ ರಾಮ್‌ಕುಮಾರ್ ಅವರಿಗೆ ಮನವಿ ಮಾಡಿದ್ದಾಳೆ.
 
ಮುಗ್ದ ಬಾಲಕಿಯ ಹೇಳಿಕೆಯಿಂದ ಆಶ್ಚರ್ಯಗೊಂಡ ರಾಮ್‌ಕುಮಾರ್, ಪಿಗ್ಗಿ ಬ್ಯಾಂಕ್‌‌ನ್ನು ಆಕೆಗೆ ಹಿಂದಿರುಗಿಸಿ, ನಿನ್ನ ತಾಯಿಯ ಆತ್ಮಹತ್ಯೆ ಹಿಂದಿರುವ ಆರೋಪಿಗಳನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದರು. 
 
ವರದಿಗಳ ಪ್ರಕಾರ, ಮನ್ವಿ ಅವರ ತಾಯಿ ಸೀಮಾ ಐದು ವರ್ಷಗಳ ಹಿಂದೆ ಸಂಜೀವ್ ಕೌಶಿಕ್ ಅವರನ್ನು ಮದುವೆಯಾದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಸಂಜೀವ್ ಸೀಮಾಳನ್ನು ವರದಕ್ಷಿಣೆಗಾಗಿ ಕಿರುಕುಳ ಮಾಡಲಾರಂಭಿಸಿದರು. ಪತಿಯ ವರ್ತನೆಯಿಂದ ಬೇಸತ್ತು  ಸೀಮಾ ಕಳೆದ ನಾಲ್ಕು ವರ್ಷಗಳಿಂದ  ತನ್ನ ಪೋಷಕರೊಂದಿಗೆ ಉಳಿದುಕೊಂಡಿದ್ದಳು.
 
ಪೊಲೀಸರು ಆರೋಪಿ ಸಂಜೀವ್ ಮತ್ತು ಅವರ ಸಂಬಂಧಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮೋದ್ ಮುತಾಲಿಕ್ ವಿರುದ್ಧ ಪೇಜಾವರ್ ಶ್ರೀ ಗರಂ