Publish Date: Thu, 29 Jun 2017 (18:27 IST)
Updated Date: Thu, 29 Jun 2017 (18:29 IST)
ಹಿಂದುಗಳಲ್ಲಿ ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಆದರೆ, ಯಾರು ಮಾಡುತ್ತಾರೆ ಎಂದು ಹೇಳುವುದಿಲ್ಲ ಎಂದು ಪೇಜಾವರ್ ಶ್ರೀಗಳು ಹೇಳಿದ್ದಾರೆ.
ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಹಿಂದುಗಳು ಗೋಮಾಂಸ ಭಕ್ಷಣೆ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇವಲ ಮುಸ್ಲಿಮರು ಮಾತ್ರವೇ ಗೋಮಾಂಸ ಸೇವನೆ ಮಾಡುತ್ತಾರೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ರಾಮಮಂದಿರ ವಿಚಾರದಲ್ಲಿ ನನ್ನ ಸಂಧಾನ ವಿಫಲವಾಗಿದೆ. ಆದರೆ, ವಿಶ್ವ ಹಿಂದು ಪರಿಷತ್‌ನೊಂದಿಗಿನ ಸಂಬಂಧಕ್ಕೆ ಭಂಗವಾಗಿಲ್ಲ. ಕೆಲವು ಸಂಘ ಪರಿವಾರದವರು ಸಂಪರ್ಕಿಸಿದ್ದಾರೆ ಎಂದರು,
ದಶಕದ ಹಿಂದೆ ರಾಮಮಂದಿರ ವಿಚಾರದಲ್ಲಿ ಸಂಧಾನ ನಡೆದಿತ್ತು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಒಪ್ಪಿಗೆ ಸೂಚಿಸಿದ್ದರು. ವಾರದಲ್ಲಿ ಒಂದು ದಿನ ರಾಮಮಂದಿರದಲ್ಲಿ ನಮಾಜ್ ಮಾಡುವ ವಿಚಾರದಲ್ಲಿ ಭಿನ್ನಮತ ಏರ್ಪಟ್ಟಿತ್ತು ಎಂದು ಪೇಜಾವರ್ ಶ್ರೀಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.