Select Your Language

Notifications

webdunia
webdunia
webdunia
webdunia

ನಾನು ಬಿಜೆಪಿಯ ಐಟಂ ಗರ್ಲ್ ಆಗಿದ್ದೇನೆ: ಆಜಂ ಖಾನ್ ಹೇಳಿಕೆ

ನಾನು ಬಿಜೆಪಿಯ ಐಟಂ ಗರ್ಲ್ ಆಗಿದ್ದೇನೆ: ಆಜಂ ಖಾನ್ ಹೇಳಿಕೆ
ಲಖನೌ , ಗುರುವಾರ, 29 ಜೂನ್ 2017 (18:02 IST)
ಲಖನೌ: ಯೋಧರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್, ನಾನು ಬಿಜೆಪಿಯ ಐಟಂ ಗರ್ಲ್ ಆಗಿದ್ದೇನೆ. ಕಾರಣ ಯಾವಾಗಲೂ ಬಿಜೆಪಿ ನನ್ನ ಹೇಳಿಕೆಗಳನ್ನು ಹಿಡಿದುಕೊಂಡು ರಾಜಕೀಯ ಮಾಡುತ್ತಿರುತ್ತದೆ ಎಂದು ಕಿಡಿಕಾರಿದ್ದಾರೆ.
 
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆಜಂ ಖಾನ್, ಭಾರತೀಯ ಸೇನೆ ಕುರಿತಂತೆ ನಾನು ನೀಡಿದ್ದ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿವೆ ಎಂದು ಹೇಳಿದ್ದಾರೆ. ಅಲ್ಲದೇ ನಾನೀಗ ಬಿಜೆಪಿಯ ಐಟಂ ಗರ್ಲ್; ಅವರಿಗೆ ಮಾತನಾಡಲು ಬೇರೆ ಯಾರೂ ಸಿಗುತ್ತಿಲ್ಲ. ಅವರು ಇಲ್ಲಿ ಚುನಾವಣೆಗಳನ್ನು ಗೆದ್ದಿರುವುದೇ ನನ್ನನ್ನು ಗುರಿ ಇರಿಸಿಕೊಂಡು' ಎಂದು ಹೇಳಿದ್ದಾರೆ.
 
ನಿನ್ನೆ ರಾಮಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಆಜಂ ಖಾನ್, ಗಡಿಯಲ್ಲಿ ಯುದ್ದ ನಡೆಯುತ್ತಿದೆ; ಆದರೆ ಒಂದು ಸ್ಥಳದಲ್ಲಿ ಹೆಂಗಸೊಬ್ಬಳು ಸೈನಿಕರನ್ನು ಕೊಂದಿದ್ದಾಳೆ. ಆಕೆಯ ಈ ಕೃತ್ಯದ ಹಿಂದೆ ಯಾವುದೋ ಕಾರಣ ಇರಬೇಕೆಂದು ಆಲೋಚಿಸುವಂತೆ ಈ ಘಟನೆ ಮಾಡುತ್ತಿದೆ. ಮಹಿಳಾ ಭಯೋತ್ಪಾದಕರು ಜವಾನರ ಗುಪ್ತಾಂಗಗಳನ್ನು ಕತ್ತರಿಸುತ್ತಾರೆ; ಯಾಕೆಂದರೆ ಸೈನಿಕರ ಈ ನಿರ್ದಿಷ್ಟ ಅಂಗದ ಬಗ್ಗೆ ಅವರಿಗೆ ದೂರು ಇದೆ ಎಂಬುದು ಸ್ಪಷ್ಟವಿದೆ; ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ಹೇಳಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಕೊಲೆಗಡುಕ ಸಂಸ್ಕ್ರತಿ ರಾಜ್ಯಕ್ಕೆ ತರಬೇಡಿ: ಸುರೇಶ್ ಕುಮಾರ್