Select Your Language

Notifications

webdunia
webdunia
webdunia
webdunia

ಟಾಪ್ ಟೆರರ್ ಕ್ಲಬ್ ಸೇರಿದ ಜೈಷ್-ಇ-ಮೊಹಮ್ಮದ್

ಟಾಪ್ ಟೆರರ್ ಕ್ಲಬ್ ಸೇರಿದ ಜೈಷ್-ಇ-ಮೊಹಮ್ಮದ್
ನವದೆಹಲಿ , ಮಂಗಳವಾರ, 20 ಸೆಪ್ಟಂಬರ್ 2016 (16:17 IST)
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಮ್ಮ ಸೈನಿಕರ ರಕ್ತದೋಕುಳಿ ನಡೆಸುವುದರ ಮೂಲಕ ಮಸೂದ್ ಅಜರ್ ನಾಯಕತ್ವದ ಜೈಷ್-ಇ-ಮೊಹಮ್ಮದ್, ಎಲ್‌ಇಟಿ, ಅಲ್ ಖೈದಾದಂತೆ ಟಾಪ್ ಟೆರರ್ ಕ್ಲಬ್‌ಗೆ ಸೇರಿದೆ. 

ಇದಕ್ಕೆ ವಿರುದ್ಧವಾಗಿ, ಉಪಖಂಡದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪು ಎಂದು ಪರಿಗಣಿಸಲ್ಪಟ್ಟಿದ್ದ ಲಷ್ಕರ್ ಇ ತೊಯ್ಬಾ  26/11 ಮುಂಬೈ ದಾಳಿಯ ಬಳಿಕ ತನ್ನ ಗಮನಾರ್ಹ ಸಾಮರ್ಥ್ಯವನ್ನು ತೋರಿಸಲು ವಿಫಲವಾಗಿದೆ. ಇತ್ತೀಚಿಗೆ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದ ಇದರ ಸದಸ್ಯರಲ್ಲಿ ಕೆಲವು ಬಂಧಿಸಲ್ಪಟ್ಟಿದ್ದರೆ ಮತ್ತೆ ಕೆಲವರು ಹತ್ಯೆಗೀಡಾಗಿದ್ದರು. 
 
ಇತ್ತೀಚಿನ ಪ್ರಕರಣದ ಬಗ್ಗೆ ಹೇಳುವುದಾದರೆ ಲಷ್ಕರ್ ಇ ತೊಯ್ಬಾ ಉಗ್ರ, ಲಾಹೋರ್ ನಿವಾಸಿ, 22 ವರ್ಷದ ಬಹದ್ದೂರ್ ಅಲಿ ಭಾರತದ ಗಡಿಯಲ್ಲಿ ಬಂಧನಕ್ಕೊಳಪಟ್ಟಿದ್ದ. ಇನ್ನೊಬ್ಬ ಸದಸ್ಯ ನವೇದ್ ಅಲಿ ಕಳೆದ ವರ್ಷ ಉದಮ್‌ಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆಯ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಸಿಕ್ಕಿ ಬಿದ್ದಿದ್ದ. ಕಣಿವೆಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಹರಡಿರುವ ಈ ಗುಂಪು ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಕ್ಕಿಂತ ಹೆಚ್ಚಾಗಿ ಅವರ ಬೆಂಗಾವಲು ವಾಹನಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತದೆ ಎನ್ನುತ್ತವೆ ಭದ್ರತಾ ಸಂಸ್ಥೆಗಳು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಸರಾದಿಂದ ದೀಪಾವಳಿಯವರೆಗೆ ಮೈಸೂರು ಶಾಪಿಂಗ್ ಫೆಸ್ಟಿವಲ್; ಕಾದಿವೆ ಆಕರ್ಷಕ ಬಹುಮಾನ