Select Your Language

Notifications

webdunia
webdunia
webdunia
webdunia

ದಸರಾದಿಂದ ದೀಪಾವಳಿಯವರೆಗೆ ಮೈಸೂರು ಶಾಪಿಂಗ್ ಫೆಸ್ಟಿವಲ್; ಕಾದಿವೆ ಆಕರ್ಷಕ ಬಹುಮಾನ

ದಸರಾದಿಂದ ದೀಪಾವಳಿಯವರೆಗೆ ಮೈಸೂರು ಶಾಪಿಂಗ್ ಫೆಸ್ಟಿವಲ್; ಕಾದಿವೆ ಆಕರ್ಷಕ ಬಹುಮಾನ
ಮೈಸೂರು , ಮಂಗಳವಾರ, 20 ಸೆಪ್ಟಂಬರ್ 2016 (16:13 IST)
ದಸರಾ ಪ್ರಚಾರಾರ್ಥವಾಗಿ ಮತ್ತು ಮತ್ತು ನಗರದ ಆರ್ಥಿಕತೆ ಹೆಚ್ಚಿಸಲು ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ಮೀಡಿಯಾಟ್ರಿ ಸಂಸ್ಥೆ 'ಮೈಸೂರು ಶಾಪಿಂಗ್ ಫೆಸ್ಟಿವಲ್' ನಡೆಸಲು ಮುಂದಾಗಿದೆ. ದಸರಾದಿಂದ ಆರಂಭವಾಗಿ ದೀಪಾವಳಿಯವರೆಗೆ ಈ ಮಾರಾಟದ ಉತ್ಸವ ನಡೆಯಲಿದೆ.
 
ಸಂಘಟಕ ಸಂಸ್ಥೆ ಮೀಡಿಯಾಟ್ರಿ ಪ್ರಕಾರ, ಉತ್ಸವವನ್ನು ನಗರದಾದ್ಯಂತ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದ್ದು ವ್ಯಾಪಾರ ಕೇಂದ್ರ ಪ್ರದೇಶಗಳಲ್ಲಿ 1,000ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಸೆಪ್ಟೆಂಬರ್ 24 ರಿಂದ ನವೆಂಬರ್ 5ರ ವರೆಗೆ ನಡೆಯುವ ಈ 43 ದಿನಗಳ ಉತ್ಸವವನ್ನು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿನ ಮಹೇಶ್ ಶರ್ಮಾ ಸೆಪ್ಟೆಂಬರ್ 25ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ನಟ ಕಿಚ್ಚಾ ಸುದೀಪ್ ಈ ಉತ್ಸವದ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. 
 
"ಮೈಸೂರು ಶಾಪಿಂಗ್ ಫೆಸ್ಟಿವಲ್ ವ್ಯಾಪಕ ಸಂಗ್ರಹಗಳನ್ನು ಹೊಂದಿರುವುದರ ಜತೆಗೆ ರಿಯಾಯಿತಿ, ಗಂಟೆಯ, ದೈನಂದಿನ ,ನಾಲ್ಕು- ಸಾಪ್ತಾಹಿಕ ಮತ್ತು ಒಂದು ಬಂಪರ್ ಲಕ್ಕಿ ಲಾಟರಿಯಂತ ಇತರ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಸದಸ್ಯ ಅಂಗಡಿಗಳು ಸಾಮಾನ್ಯ ಅಂಗಡಿಗಳಲ್ಲಿ 500 ರೂ ಸಾಮಾನು ಖರೀದಿ ಮತ್ತು ಬೆಳ್ಳಿ, ಚಿನ್ನ ಮತ್ತು ವಜ್ರ ಐಟಂಗಳ ಖರೀದಿಯಲ್ಲಿ ಕನಿಷ್ಠ 5,000ರೂಪಾಯಿಯನ್ನು ವ್ಯಯಿಸಿದ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಿವೆ. ಬಂಪರ್ ಬಹುಮಾನ ಒಂದು ಮರ್ಸಿಡಿಸ್ ಬೆಂಝ್ ಕಾರು. ಗಂಟೆಯ ಅದೃಷ್ಟ ಲಾಟರಿಗೆ ಹಲವಾರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಗೆಲ್ಲುವ ಅವಕಾಶವಿದೆ. ದೈನಂದಿನ ಡ್ರಾನಲ್ಲಿ ಚಿನ್ನದ ನಾಣ್ಯ, ಮಂಗಳವಾರಕ್ಕೆ ಸೈಕಲ್, ಗುರುವಾರಕ್ಕೆ ದ್ವಿಚಕ್ರವಾಹನ, ಶುಕ್ರವಾರಕ್ಕೆ ದುಬೈ ಪ್ರವಾಸ ಮತ್ತು ಶನಿವಾರದ ಲಕ್ಕಿ ಡಿಪ್ ಆಗಿ ಕಾರ್‌ನ್ನು ಗೆಲ್ಲುವ ಅವಕಾಶವಿದೆ", ಎಂದು ಮೀಡಿಯಾಟ್ರಿ ಸಂಸ್ಥೆಯ ಬಿ ಎಸ್ ಪ್ರಶಾಂತ್  ಹೇಳಿದ್ದಾರೆ. 
 
ರಾಜ್ಯ ಪ್ರವಾಸೋದ್ಯಮ ಇಲಾಖೆ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೋಟೆಲ್ ಓನರ್ಸ್ ಅಸೋಸಿಯೇಷನ್ ಮತ್ತು ಮೈಸೂರು ಜ್ಯುವೆಲರ್ಸ್ ಅಸೋಸಿಯೇಷನ್ ಈ ಉತ್ಸವಕ್ಕೆ ಬೆಂಬಲ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಸುಖ ಕೊಡಲು ನಿರಾಕರಿಸಿದ ಅತ್ತಿಗೆಯ ಮೂಗು ಕೊಯ್ದ ಮೈದುನ