Select Your Language

Notifications

webdunia
webdunia
webdunia
webdunia

ಮೈದುನನ ಮೇಲಿನ ಸೇಡಿಗಾಗಿ ಅತ್ತಿಗೆ ಮೇಲೆ ಗ್ಯಾಂಗ್ ರೇಪ್

ಮೈದುನನ ಮೇಲಿನ ಸೇಡಿಗಾಗಿ ಅತ್ತಿಗೆ ಮೇಲೆ ಗ್ಯಾಂಗ್ ರೇಪ್
ಬರೇಲಿ , ಮಂಗಳವಾರ, 13 ಡಿಸೆಂಬರ್ 2016 (11:55 IST)
ಕುಟುಂಬದ ಸದಸ್ಯರೊಬ್ಬರ ಮೇಲಿದ್ದ ಕೋಪವನ್ನು ತೀರಿಸಿಕೊಳ್ಳಲು ನಾಲ್ವರು ದುಷ್ಕರ್ಮಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮಹಿಳೆಯ ಮನೆಗೆ ನುಗ್ಗಿದ ಆರೋಪಿಗಳು ಬಂದೂಕು ತೋರಿಸಿ ಹೆದರಿಸಿ ಅತ್ಯಾಚಾರ ಎಸಗಿದ್ದಾರೆ.
 
ಪೀಡಿತ ಮಹಿಳೆಯ ಮೈದುನನ ಮೇಲಿನ ಸೇಡಿಗೆ ಈ ಕೃತ್ಯವನ್ನೆಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
 
ಸಂತ್ರಸ್ತ ಮಹಿಳೆಯ ಮೈದುನನ ಪತ್ನಿ ಕೆಲವು ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ನೊಂದುಪ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಾವಿಗೆ ಈ ಮಹಿಳೆಯೇ ಕುಮ್ಮಕ್ಕು ನೀಡಿದ್ದಳು ಎಂದು ಮೃತಳ ಸಹೋದರರು ಆರೋಪಿಸಿದ್ದರು. ಜತೆಗೆ ತಮ್ಮ ಸಹೋದರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಡಚಿಡಬಹುದಾದ ಬ್ಯಾಟರಿ ಚಾಲಿತ ’ಇ’ ಸ್ಕೂಟರ್