Select Your Language

Notifications

webdunia
webdunia
webdunia
webdunia

ಮಡಚಿಡಬಹುದಾದ ಬ್ಯಾಟರಿ ಚಾಲಿತ ’ಇ’ ಸ್ಕೂಟರ್

ಮಡಚಿಡಬಹುದಾದ ಬ್ಯಾಟರಿ ಚಾಲಿತ ’ಇ’ ಸ್ಕೂಟರ್
New Delhi , ಮಂಗಳವಾರ, 13 ಡಿಸೆಂಬರ್ 2016 (11:52 IST)
ಚೀನಾ ಮೊಬೈಲ್ ದಿಗ್ಗಜ ಕಂಪನಿ ಶಿಯೋಮಿ ಇನ್ನೊಂದು ಹೊಸ ಉತ್ಪನ್ನದೊಂದಿಗೆ ಚೀನಾ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಹೊರಟಿದೆ. ಮೊಬೈಲ್‌ಗಳ ಜೊತೆಗೆ ಕೆಲವು ಎಲಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡುವ ಈ ಸಂಸ್ಥೆ ಇತ್ತೀಚೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರನ್ನು ಡಿಸೆಂಬರ್ 15ರಿಂದ ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದೆ.
 
ಭಾರತದ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು ರೂ.19,500 ಇರಬಹುದೆಂದು ಅಂದಾಜಿಸಲಾಗಿದೆ. ಸಂಪೂರ್ಣವಾಗಿ ಇದನ್ನು ವಿಮಾನಗಳ ಬಳಕೆಯಲ್ಲಿ ಉಪಯೋಗಿಸುವ ಅಲ್ಯೂಮಿನಿಯಂನೊಂದಿಗೆ ತಯಾರಿಸಿದ್ದಾರೆ. 
 
25 ಕಿ.ಮೀ ಗರಿಷ್ಠ ವೇಗವಾಗಿ ಸಾಗುವ ಈ ಸ್ಕೂಟರ್‌ಗೆ 280 ವಾಟ್ಸ್ - ಎಲ್‌ಜಿ 1850 ಇವಿ ಲಿಥಿಯಂ ಅಯಾನ್ ಬ್ಯಾಟರಿ ಅಳವಡಿಸಿದ್ದಾರೆ. ಡಬಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಇರುವ ಕಾರಣ ವೇಗವನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು. 
 
ಇದರ ಇನ್ನೊಂದು ವಿಶೇಷ ಎಂದರೆ ಒಂದೇ ಒಂದು ಬಟನ್ ಒತ್ತಿದರೆ ಅದಕ್ಕಷ್ಟೇ ಮಡಚಿಕೊಳ್ಳುತ್ತದೆ. 12.5 ಕೆ.ಜಿ ತೂಕ ಇರುವ ಈ ಸ್ಕೂಟರನ್ನು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಳ್ಳಬಹುದು. ಬ್ಲೂಟೂತ್ ಸಹಾಯದೊಂದಿಗೆ ಸ್ಮಾರ್ಟ್‍ಫೋನ್ ಕನೆಕ್ಟ್ ಮಾಡಿಕೊಂಡು ಸ್ಕೂಟರ್ ವೇಗ, ಬ್ಯಾಟರಿ ಲೈಫ್‍ನಂತಹ ಮುಂತಾದ ಅಂಶಗಳನ್ನು ತಿಳಿದುಕೊಳ್ಳಬಹುದು. 
 
ನಿರಾಸೆಯ ಸಂಗತಿ ಎಂದರೆ ’ಇ’ ಸ್ಕೂಟರನ್ನು ಭಾರತ ಮಾರುಕಟ್ಟೆಗೆ ಶಿಯೋಮಿ ಬಿಡುಗಡೆ ಮಾಡುವ ಅವಕಾಶಗಳು ತುಂಬಾ ಕಡಿಮೆ ಇವೆ. ಏಕೆಂದರೆ ಈ ರೀತಿಯ ಉತ್ಪನ್ನಗಳನ್ನು ಕಂಪನಿ ಚೀನಾಗೆ ಮಾತ್ರ ಸೀಮಿತ ಮಾಡುತ್ತಿರುತ್ತದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್ ಇಂಡಿಯಾ ನಿರ್ದೇಶಕರಾಗಿ ಪುಲ್ಕಿತ್!