Select Your Language

Notifications

webdunia
webdunia
webdunia
webdunia

ಮರಾಠಿ vs ಹಿಂದೆ ಭಾಷೆ ವಿವಾದ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು: ಕಂಗನಾ ರನೌತ್‌

Kangana Ranaut

Sampriya

ಮಹಾರಾಷ್ಟ್ , ಭಾನುವಾರ, 6 ಜುಲೈ 2025 (17:56 IST)
ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ನಟ-ರಾಜಕಾರಣಿ ಕಂಗನಾ ರಣಾವತ್ ಅವರು ರಾಷ್ಟ್ರದ ಐಕ್ಯತೆಯನ್ನು ಕಾಪಾಡುವ ಅಗತ್ಯವನ್ನು ಭಾನುವಾರ ಒತ್ತಿ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ತಮ್ಮ ಕ್ಷೇತ್ರವಾದ ಮಂಡಿಯಲ್ಲಿ ಮೇಘಸ್ಫೋಟ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮರಾಠಿ ಭಾಷಾ ಗದ್ದಲದ ಕುರಿತು ಪ್ರತಿಕ್ರಿಯಿಸಿದ್ದಾರೆ.

"ನಾವು ದೇಶದಲ್ಲಿ ಏಕತೆಯ ಮನೋಭಾವವನ್ನು ಕಾಪಾಡಬೇಕು. ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು" ಎಂದು ಮುಂಬೈನಲ್ಲಿ ಹಿಂದಿ ಮತ್ತು ಮರಾಠಿ ಗದ್ದಲವನ್ನು ಉಲ್ಲೇಖಿಸಿ ಕಂಗನಾ ರನೌತ್ ಹೇಳಿದರು.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಅಂಗಡಿಯವನೊಬ್ಬನ ಮೇಲೆ ಹಲ್ಲೆ ನಡೆಸಿದ ವಿವಾದದ ಹಿನ್ನೆಲೆಯಲ್ಲಿ ಆಕೆಯ ಕಾಮೆಂಟ್‌ಗಳನ್ನು ಮಾಡಲಾಗಿದೆ ಮತ್ತು ಮರಾಠಿ ಮಾತನಾಡದ ಅಥವಾ ಭಾಷೆಯನ್ನು ಕಲಿಯಲು ನಿರಾಕರಿಸಿದ್ದಕ್ಕಾಗಿ ಉದ್ಯಮಿಯೊಬ್ಬರ ಕಚೇರಿಯನ್ನು ಧ್ವಂಸ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಭಾರೀ ಚರ್ಚೆಗೆ ಕಾರಣವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಬೇಕು: ರಂಭಾಪುರಿ ಸ್ವಾಮೀಜಿ