ನವದೆಹಲಿ: ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರು 90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇನ್ನೂ 130ವರ್ಷಗಳ ಕಾಲ ಜನರ ಸೇವೆ ಬಯಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ.
ದಲೈ ಲಾಮಾ ಅವರು ತಮ್ಮ 90 ನೇ ಜನ್ಮದಿನದ ಹಿನ್ನೆಲೆ ಸಾವಿರಾರು ಅನುಯಾಯಿಗಳು ಭಾರತದ ಧರ್ಮಶಾಲಾದಲ್ಲಿ ಜಮಾಯಿಸಿದ್ದರಿಂದ, 130 ವರ್ಷ ಮೀರಿ ಬದುಕುವ ಭರವಸೆ ಇದೆ ಎಂದು ಹೇಳಿದರು.
ತ್ಸುಗ್ಲಾಗ್‌ಖಾಂಗ್‌ನಲ್ಲಿ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅವಲೋಕಿತೇಶ್ವರನ ಆರ್ಶಿರ್ವಾದದಿಂದ130 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕುವ ವಿಶ್ವಾಸವಿದೆ ಎಂದರು.
ಹಲವು ಭವಿಷ್ಯವಾಣಿಗಳನ್ನು ನೋಡುವಾಗ ನನಗೆ ಅವಲೋಕಿತೇಶ್ವರನ ಆಶೀರ್ವಾದವಿದೆ ಎಂದು ಅನಿಸುತ್ತದೆ. ಇಲ್ಲಿಯವರೆಗೆ ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30-40 ವರ್ಷಗಳ ಕಾಲ ಬದುಕಬೇಕೆಂದು ಹೇಳಿಕೊಂಡರು.